ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡೋಕೆ ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕ್ನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪರೇ ಮುಖ್ಯಮಂತ್ರಿ ಆಗಿರ್ತಾರೆ ಹಾಗೂ ಮುಂದಿನ ಚುನಾವಣೆಯನ್ನೂ ನಾವು ಯಡಿಯೂರಪ್ಪರ ಸಮ್ಮುಖದಲ್ಲೇ ಎದುರಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ನಾವು ಯಡಿಯೂರಪ್ಪ ಹಾಗೂ ಅಮಿತ್ ಷಾರನ್ನ ನಂಬಿಯೇ ಬಿಜೆಪಿಗೆ ಬಂದಿದ್ದೇವೆ. ಬಿಜೆಪಿಯ ಎಲ್ಲಾ ಶಾಸಕರೂ ಒಂದು ಕುಟುಂಬದವರಂತೆ ಇದ್ದೇವೆ. ಯಡಿಯೂರಪ್ಪ ಎಲ್ಲರನ್ನೂ ಕರೆದು ಒಮ್ಮೆ ಮಾತನಾಡಬೇಕು ಎಂದು ನಾನು ಅವರಲ್ಲಿ ಮನವಿ ಮಾಡುತ್ತೇನೆ.
ಸಿ.ಪಿ ಯೋಗೀಶ್ವರ್ ಈಗಲೂ ನನ್ನ ಸ್ನೇಹಿತ. ಮಾಧ್ಯಮಗಳ ಮೂಲಕ ನಾನು ಅವನಲ್ಲಿ ಮನವಿ ಮಾಡುಕೊಳ್ಳುತ್ತಿದ್ದೇನೆ. ಏನಾದರೂ ತಪ್ಪು ಗ್ರಹಿಕೆ ಆಗಿದ್ದಲ್ಲಿ ಕೂತು ಸರಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ರು.
Laxmi News 24×7