Breaking News

ಜೂಜಾಟ: 18 ಆರೋಪಿಗಳ ಬಂಧನ

Spread the love

ಬೆಳಗಾವಿ: ಇಲ್ಲಿನ ಖಂಜರ್‌ ಗಲ್ಲಿಯಲ್ಲಿ ಶನಿವಾರ ಮಧ್ಯರಾತ್ರಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅದೇ ಗಲ್ಲಿಯ ಜುಬೇರ ಸುಬೇದಾರ, ಆರೀಫ ಖೊತ್ವಾಲ್, ಅಯಾಜ್ ಖತೀಬ, ಅಬ್ದುಲ್ ಸಲಾಮ್ ಬಾಳೇಕುಂದ್ರಿ, ಸೊಹೆಲ್ ಮುಲ್ಲಾ, ಷರೀಪ ಮುಲ್ಲಾ, ಅಬುತಾಲಿಪ್ ಶೇಕ್‌, ಆಸೀಫ್‌ ಸೈಯದ್, ಆಯೂಬಖಾನ ಪಠಾಣ, ವಾಸಿಂ ಸೌದಾಗರ, ಇಮ್ರಾನ ಪಟೇಲ, ವಾಸಿಂ ಅಲವಾಡಕರ, ಮುಸ್ತಾಕ ತಹಶೀಲ್ದಾರ, ಇಕ್ಬಾಲ ನರೇಗಲ್‌, ಫಿರೋಜ ಪಠಾಣ, ರಫೀಕ ತಹಶೀಲ್ದಾರ, ಸಲೀಂ ಖತೀಬ ಹಾಗೂ ಸಾಹ ಪಠಾಣ ಬಂಧಿತರು. ಅವರಿಂದ ₹ 1.13 ಲಕ್ಷ, 18 ಮೊಬೈಲ್‌ ಫೋನ್‌, ಒಂದು ದ್ವಿಚಕ್ರವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.


Spread the love

About Laxminews 24x7

Check Also

15 ದಿನದ ಮಗುವಿಗೆ ತಂದೆ ವಿಷಪ್ರಾಶನ ?: ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ತಾಯಿ

Spread the loveಬೆಳಗಾವಿ: ಪ್ರಪಂಚವನ್ನೇ ಕಾಣದ 15 ದಿನದ ಮಗುವಿಗೆ ಪಾಪಿ ತಂದಯೇ ವಿಷಪ್ರಾಶನ ಮಾಡಿದ್ದಾನೆ ಎಂದು ಹೆತ್ತ ತಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ