ಬೆಂಗಳೂರು: ಹೆತ್ತ ಕಂದಮ್ಮಗಳ ಮೇಲೆ ಕ್ರೂರಿ ತಾಯಿಯೊಬ್ಬಳು ಭೀಕರ ಹಲ್ಲೆ ನಡೆಸಿರುವ ಘಟನೆಯೊಂದು ನಗರದಲ್ಲಿ ನಡೆದಿದೆ. ತಾಯಿ ಹಾಗು ಆಕೆಯ ಸ್ನೇಹಿತ ಸೇರಿ 6 ವರ್ಷ ಹಾಗೂ 7 ವರ್ಷದ ಮಕ್ಕಳ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಮಕ್ಕಳನ್ನು ಹೊಡೆದು, ಕಚ್ಚಿ, ಸುಟ್ಟ ಗಾಯಗಳನ್ನು ಮಾಡಿದ್ದಾರೆ.
ಆಸ್ಪತ್ರೆಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುವ ಜಯಮ್ಮ ಈ ಪಾಪಿ ತಾಯಿ. ಪ್ರಕರಣಯೊಂದರಲ್ಲಿ ಜಯಮ್ಮನ ಪತಿ ಕಿರಣ್ ಹಾಸನದ ಜೈಲ್ ಸೇರಿದ್ದರಿಂದ ತನ್ನ ಜೊತೆ ಕೆಲಸ ಮಾಡುತ್ತಿದ್ದ ಇನ್ನೊಬ್ಬಾಕೆ ಮತ್ತು ಆಕೆಯ ಪತಿ ಹೇಮಂತ್ ಎನ್ನುವವ ಜಯಮ್ಮನ ಮನೆ ಸೇರಿದ್ದರು. ಹೇಮಂತ್ ಮತ್ತು ಆತನ ಕುಟುಂಬ ಮನೆಯಲ್ಲಿರುವುದರ ಬಗ್ಗೆ ಮಕ್ಕಳು ಫೋನ್ ಮೂಲಕ ತನ್ನ ತಂದೆಗೆ ಹೇಳಿದ್ದಾರೆ.
ಇದೇ ಕಾರಣಕ್ಕೆ ಜಯಮ್ಮ ಹಾಗು ಜೈಲಿನಲ್ಲಿರುವ ಪತಿ ಮಧ್ಯೆ ಫೋನ್ನಲ್ಲಿ ಗಲಾಟೆಯಾಗಿದೆ. ಬಳಿಕ ಕುಪಿತಗೊಂಡ ಜಯಮ್ಮ ಹಾಗು ಹೇಮಂತ್ ಮಾಹಿತಿ ನೀಡಿದ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಮಕ್ಕಳ ಮೇಲೆ ಭೀಕರವಾಗಿ ಹಲ್ಲೆಯಾಗಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂದಿದ್ದರಿಂದ ಜಯಮ್ಮ ಹಾಗು ಹೇಮಂತ್ನನ್ನು ಸದ್ಯ ಪೊಲೀಸರು ಬಂಧಿಸಿದ್ದು, ಮಕ್ಕಳನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ
Laxmi News 24×7