ಬೆಂಗಳೂರು : ಭಾನುವಾರವೂ ರಾಜ್ಯದಲ್ಲಿ ಕೊರೊನಾ ಅರ್ಭಟ ಮುಂದುವರೆದಿದ್ದು,ಇಂದು 5,532 ಜನರಿಗೆ ಕೋವಿಡ್-19 ಸೋಂಕು ತಗುಲಿದೆ.
ಇಂದು84 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತ ಪ್ರಕರಣಗಳ ಸಂಖ್ಯೆ 1,34,819 ಆಗಿದ್ದು, ಇದರಲ್ಲಿ 57,725 ಜನರು ಬಿಡುಗಡೆಯಾಗಿದ್ದರೆ, 74,590 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ 2,496 ಜನರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.
ರಾಜಧಾನಿ ಬೆಂಗಳೂರು ನಗರದಲ್ಲಿ ಕೋವಿಡ್ ಮಹಾಮಾರಿಯ ಆರ್ಭಟ ಎಂದಿನಂತೆ ಮುಂದುವರಿದಿದ್ದು, 2105 ಹೊಸ ಪ್ರಕರಣಗಳು ವರದಿಯಾಗಿವೆ. ಅಲ್ಲದೆ ನಗರದಲ್ಲಿ ಇಂದು 21 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಕಳೆದ ಕೆಲವು ದಿನಗಳ ಆರ್ಭಟಕ್ಕೆ ಹೋಲಿಸಿದರೆ,
ರಾಜ್ಯದಲ್ಲಿ ಕೊರೋನಾದಿಂದ ಗುಣ ಹೊಂದುತ್ತಿರುವವರ ಸಂಖ್ಯೆ ವೃದ್ಧಿಸಿದೆ.
ಭಾನುವಾರ ರಾಜ್ಯದಲ್ಲಿ ಒಟ್ಟು 5532 ಮಂದಿ ಸೋಂಕಿಗೆ ಗುರಿಯಾದರೇ, 4077 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಭಾರೀ ಪ್ರಮಾಣದ ಪ್ರಕರಣಗಳಿಗೆ ಸಾಕ್ಷಿಯಾಗಿರುವ ರಾಜಧಾನಿ ಬೆಂಗಳೂರಿನಲ್ಲಿ
2331 ಸೋಂಕಿತರು ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.
ಭಾನುವಾರದ ಪ್ರಮಾಣವೂ ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆ ಸಕ್ರಿಯ ಸೋಂಕಿತರ ಸಂಖ್ಯೆ 74590 ಇದ್ದರೇ, ಗುಣ ಹೊಂದಿದವರ ಸಂಖ್ಯೆ 57725 ಇದೆ. ಈವರೆಗೆ 2496 ಜನ ಸೋಂಕು ಸಂಬಂಧಿ ಕಾರಣಗಳಿಗೆ ಮೃತರಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 2105, ಬಳ್ಳಾರಿ (377), ಕಲಬುರಗಿ (238), ಮೈಸೂರು (238), ರಾಯಚೂರು (212), ಉಡುಪಿ (182), ಧಾರವಾಡ (181), ದಾವಣಗೆರೆ (178), ಬೆಳಗಾವಿ (172), ದಕ್ಷಿಣ ಕನ್ನಡ (163), ಹಾವೇರಿ (146), ಹಾಸನ (142), ಬೀದರ್ (135), ಬಾಗಲಕೋಟೆ (131) ಮತ್ತು ವಿಜಯಪುರ (113) ಪ್ರಕರಣಗಳು ಪತ್ತೆಯಾಗಿವೆ.
638 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇದೀಗ ಒಟ್ಟು 74590 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿವೆ.