Breaking News

ಬಳ್ಳಾರಿಯ ಕೋವಿಡ್‌ ಆಸ್ಪತ್ರೆಗೆ 65 ವೈದ್ಯಾಧಿಕಾರಿಗಳ ನೇಮಕಕ್ಕೆ ಆಹ್ವಾನ: ನಾಲ್ಕು ಲಕ್ಷ ರೂ. ಸಂಬಳ

Spread the love

ಕರೊನಾ ಸಾಂಕ್ರಾಮಿಕವನ್ನು ತಡೆಗಟ್ಟಲು ಹಾಗೂ ಕೋವಿಡ್​ ರೋಗಿಗಳಿಗೆ ಉತ್ತಮ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಬಳ್ಳಾರಿಯ ಜಿಲ್ಲಾ ಆಡಳಿತ ಸಂಡೂರು ತಾಲೂಕಿನ ತೋರಣಗಲ್​ನಲ್ಲಿ 1000 ಹಾಸಿಗೆಯ ಕೋವಿಡ್​ ಆಸ್ಪತ್ರೆಯನ್ನು ತೆರೆದಿದೆ. ಸದರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ವೈದ್ಯರು/ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು: 65

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಆರಂಭಿಸಿರುವ 1,000 ಹಾಸಿಗೆ ಕೋವಿಡ್​ ಆಸ್ಪತ್ರೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 11 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು ಯಾವುದೇ ಕಾರಣಕ್ಕೂ ಕಾಯಂಗೊಳಿಸಲಾಗುವುದಿಲ್ಲ. ಜಿಲ್ಲಾ ಆಡಳಿತ ಒಪ್ಪಿದಲ್ಲಿ ಮಾತ್ರ ಸೇವಾ ಅವಧಿಯನ್ನು ಮುಂದುವರಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಮೇ 20ನೇ ತಾರೀಕಿನವರೆಗೂ ಅಗತ್ಯ ದಾಖಲೆಯೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.

ಹುದ್ದೆ ವಿವರ
* ಫಿಜಿಷಿಯನ್​/ ಶ್ವಾಸಕೋಶ ತಜ್ಞರು – 20
* ಅರಿವಳಿಕೆ ತಜ್ಞರು – 15
* ವೈದ್ಯರು – 30

ವಿರ್ದ್ಯಾತೆ: ಎಂಬಿಬಿಎಸ್​, ಜನರಲ್​ ಮೆಡಿಸನ್​, ಅನಸ್ತೇಷಿಯಾ ಅಥವಾ ತಜ್ಞತೆಗೆ ಅನುಸಾರವಾಗಿ ಸ್ನಾತಕೋತ್ತರ ಪದವಿ/ ಡಿಪ್ಲೊಮಾ

ವೇತನ: ಫಿಜಿಷಿಯನ್​ ಹಾಗೂ ಅರಿವಳಿಕೆ ತಜ್ಞರಿಗೆ ಮಾಸಿಕ 4,00,000 ರೂ., ವೈದ್ಯರಿಗೆ ಮಾಸಿಕ 1,00,000 ರೂ. ವೇತನ ನೀಡಲಾಗುವುದು.

ಸೂಚನೆ: ರಾಜ್ಯದ ಯಾವುದೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ/ ಸರ್ಕಾರಿ ವೈದ್ಯಕಿಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ/ ಗುತ್ತಿಗೆ ವೈದ್ಯರ ಅಜಿರ್ಗಳನ್ನು ಪರಿಗಣಿಸಲಾಗುವುದಿಲ್ಲ. ನೇಮಕಾತಿ ಹೊಂದಿದ ವೈದ್ಯರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ.

ಅರ್ಜಿ ಸಲ್ಲಿಕೆ ಅಥವಾ ಸಂದರ್ಶನಕ್ಕೆ ಹಾಜರಾಗುವ ವಿಧಾನ: ಆಸಕ್ತ ಅಭ್ಯಥಿರ್ಗಳು ದಿನಾಂಕ 17.5.2021 ರಿಂದ 20.5.2021ರ ವರೆಗೆ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಖುದ್ದು ಹಾಜರಾಗಬೇಕು. ಅಂದೇ ದಾಖಲೆ ಪರಿಶೀಲನೆಯನ್ನು ನಡೆಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವಾಗ ಅಗತ್ಯ ದಾಖಲೆ ಹಾಗೂ ಮೂಲ ಪ್ರತಿಗಳನ್ನು ತರಬೇಕು ಎಂದು ಸೂಚಿಸಲಾಗಿದೆ.


Spread the love

About Laxminews 24x7

Check Also

ಪ್ರಜಾಪ್ರಭುತ್ವ ಉಳಿವಿಗೆ ದೇಶದ ಜನ ಒಂದಾಗಿ: ಮಲ್ಲಿಕಾರ್ಜುನ ಖರ್ಗೆ

Spread the love ನವದೆಹಲಿ: ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನ ಉಭಯ ಸದನಗಳಿಂದ 146 ಸಂಸದರನ್ನು ಅಮಾನತುಗೊಳಿಸಲಾಗಿದೆ. ಇದು ಕೇಂದ್ರ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ