Breaking News

ವೈದ್ಯರಿಗೆ ನಟ ಸೋನು ಸೂದ್ ಕೇಳಿದ ಪ್ರಶ್ನೆಗೆ ಭೇಷ್ ಎನ್ನಲೇಬೇಕು

Spread the love

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ನಟ ಸೋನು ಸೂದ್ ಕೆಲಸ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಕೊರೊನಾ ಮೊದಲ ಅಲೆ ಹಾಗೂ ಎರಡನೇ ಅಲೆ ಎರಡರಲ್ಲೂ ಸೋನು ಸೂದ್ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.

ನೆರವು ಕೇಳಿದ ಜನರಿಗೆ ಸೋನು ಸಹಾಯ ಮಾಡಿದ್ದಾರೆ. ಜನರ ನೆರವಿಗೆ ಹಗಲು-ರಾತ್ರಿ ಕೆಲಸ ಮಾಡಿದ ಸೋನು ಸೂದ್ ವೈದ್ಯರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.

ಸೋನು ಸೂದ್ ಅವರ ಇತ್ತೀಚಿನ ಟ್ವೀಟ್, ಸಾಮಾಜಿಕ ಜಾಲತಾಣದಲ್ಲಿ ಸಂವೇದನೆ ಸೃಷ್ಟಿಸಿದೆ. ಒಂದು ಸರಳ ಪ್ರಶ್ನೆ ಇದೆ. ಈ ವಿಶೇಷ ಇಂಜೆಕ್ಷನ್ ಎಲ್ಲಿಯೂ ಲಭ್ಯವಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಅದನ್ನೇ ಹಾಕುವಂತೆ ಏಕೆ ಸಲಹೆ ನೀಡುತ್ತಿದ್ದಾರೆ? ಆಸ್ಪತ್ರೆಗಳಿಗೆ ಈ ಔಷಧಿ ಪಡೆಯಲು ಸಾಧ್ಯವಾಗದಿದ್ದಾಗ, ಒಬ್ಬ ಸಾಮಾನ್ಯ ಮನುಷ್ಯ ಎಲ್ಲಿಂದ ತರುತ್ತಾನೆ? ಜನರನ್ನು ಉಳಿಸಲು ಬೇರೆ ಔಷಧಿಯನ್ನು ಬಳಸಲಾಗುವುದಿಲ್ಲವೇ? ಎಂದು ಸೋನು ಪ್ರಶ್ನೆ ಮಾಡಿದ್ದಾರೆ.

ಸೋನು ಸೂದ್ ಅವರ ಈ ಮೂರು ಪ್ರಶ್ನೆಗಳನ್ನು ಸಾಮಾನ್ಯ ಜನರು ಇಷ್ಟಪಡುತ್ತಿದ್ದಾರೆ. ಈ ಪ್ರಶ್ನೆಗಳು ಸಂಪೂರ್ಣವಾಗಿ ಸರಿಯಾಗಿದೆ ಎಂದಿದ್ದಾರೆ.

 


Spread the love

About Laxminews 24x7

Check Also

ಕಡೋಲಿಯಲ್ಲಿ ನೂತನ ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಶಂಕು ಸ್ಥಾಪನೆ

Spread the love ಕಡೋಲಿಯಲ್ಲಿ ನೂತನ ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಶಂಕು ಸ್ಥಾಪನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ