Breaking News

ರಕ್ತದಾನ ಮಹಾದಾನ’ – ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ ತರುಣ್ ಸುಧೀರ್

Spread the love

ಬೆಂಗಳೂರು : ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..

ಈ ನಡುವೆ ಲಸಿಕೆ ಅಭಿಯಾನವೂ ಶುರುವಾಗಿದೆ.. ಆದ್ರೆ ಲಸಿಕೆ ಪಡೆಯುವುದಕ್ಕೂ ಮುನ್ನ ರಕ್ತದಾನ ಮಾಡಿ ಎಂದು ಅನೇಕ ಅಭಿಯಾನಗಳ ನಡೆಯುತ್ತಿವೆ.. ಈ ಅಭಿಯಾನಕ್ಕೆ ಅನೇಕ ಸ್ಯಾಂಡಲ್‌ವುಡ್ ತಾರೆಯರು ಕೈಜೋಡಿಸಿದ್ದಾರೆ. ವಶಿಷ್ಠ ಸಿಂಹ , ರಾಗಿಣಿ ಸೇರಿದಂತೆ ಅನೇಕರು ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಇತರರಿಗೂ ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ..

ಇದೀಗ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಅದಕ್ಕು ಮುಂಚೆ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ‘ರಕ್ತದಾನ ಬೇರೆಯವರ ಜೀವ ಉಳಿಸುವುದು, ಲಸಿಕೆ ನಮ್ಮ ಜೀವ ಉಳಿಸುತ್ತದೆ’ ಎಂದು ಹೇಳಿದ್ದಾರೆ. ಜೊತೆಗೆ ‘ರಕ್ತದಾನ ಮಹಾದಾನ’ ವಿನಂತಿ ಮಾಡುವ ಮೂಲಕ ತರುಣ್ ಸುಧೀರ್ ಇತರರಿಗೆ ಮಾದರಿಯಾಗಿದ್ದಾರೆ.

ಅಂದ್ಹಾಗೆ ಕೋವಿಡ್ ವ್ಯಾಕ್ಸಿನ್ ಪಡೆದ ಆರು ತಿಂಗಳವರೆಗೂ ರಕ್ತದಾನ ಮಾಡುವಂತಿಲ್ಲ. ಹಾಗಾಗಿ, ಲಸಿಕೆ ಪಡೆಯುವುದಕ್ಕೂ ಮೊದಲೇ ರಕ್ತದಾನ ಮಾಡಿ ಕೊರೊನಾ ಪರಿಸ್ಥಿತಿಯಲ್ಲಿ ಎದುರಾಗಬಹುದಾದ ರಕ್ತದ ಅಭಾವ ನೀಗಿಸಲು ಇದು ಸಹಕಾರಿಯಾಗಲಿದೆ.

ಕೊರೊನ ಮಹಾಮಾರಿ:

ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.

ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.

ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .

ಜನ ನಿಬಿಡ ಪ್ರದೇಶದಿಂದ ದೂರವಿರಿ.

ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.

ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.

ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.

ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ