Breaking News

ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ದರ ದಾಖಲೆಯ ಶೇ. 10.49ಕ್ಕೆ ಏರಿಕೆ

Spread the love

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರವು(WPI) ಏಪ್ರಿ‌ ತಿಂಗಳಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಶೇಕಡಾ 10.49ರಷ್ಟು ತಲುಪಿದೆ. ಕಚ್ಚಾ ತೈಲ ದರ ಏರಿಕೆ ಹಾಗೂ ಉತ್ಪಾದನಾ ಸಾಮಗ್ರಿಗಳ ಬೆಲೆ ಏರಿಕೆಯು ಸಗಟು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣವಾಗಿದೆ.

2021ರ ಮಾರ್ಚ್​ನಲ್ಲಿ ಸಗಣಟು ಹಣದುಬ್ಬರ ಶೇಕಡಾ 7.39 ರಷ್ಟಿತ್ತು. ಒಂದು ವರ್ಷದ ಹಿಂದೆ ಶೇ (-) 1.57 ಇತ್ತು. ಆದರೆ ಈ 2021ರ ಏಪ್ರಿಲ್​ನಲ್ಲಿ ಸತತ ನಾಲ್ಕನೇ ಬಾರಿಗೆ WPI ಹಣದುಬ್ಬರ ಏರಿಕೆ ಕಂಡಿದೆ.

“ಏಪ್ರಿಲ್ 2021 ರಲ್ಲಿ ವಾರ್ಷಿಕ ಹಣದುಬ್ಬರ ದರವು ಹೆಚ್ಚಾಗಿದೆ ಏಕೆಂದರೆ ಮುಖ್ಯವಾಗಿ ಕಚ್ಚಾ ಪೆಟ್ರೋಲಿಯಂ, ಖನಿಜ ತೈಲಗಳಾದ ಪೆಟ್ರೋಲ್, ಡೀಸೆಲ್ ಇತ್ಯಾದಿಗಳ ಬೆಲೆಗಳು ಮತ್ತು ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ತಯಾರಿಸಿದ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ” ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಆಹಾರ ಹಣದುಬ್ಬರವು ಶೇಕಡಾ 4.92ರಷ್ಟು ಏರಿದರೆ, ಇಂಧನ ಹಣದುಬ್ಬರವು ಶೇಕಡಾ 20.94ರಷ್ಟು ಏರಿದೆ ಹಾಗೂ ತಯಾರಿಸಿದ ಉತ್ಪನ್ನಗಳ ಹಣದುಬ್ಬರವು ಶೇಕಡಾ 9.01ರಷ್ಟಿದೆ.

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಎಂದರೇನು?

ಒಂದು ಉತ್ಪನ್ನ ಅಥವಾ ವಸ್ತು ಅಂತಿಮವಾಗಿ ಗ್ರಾಹಕರನ್ನು ತಲುಪುವುದಕ್ಕೆ ಮುಂಚೆ ವಿವಿಧ ಹಂತಗಳನ್ನು ದಾಟಿ ಬರುತ್ತದೆ. ಮೊದಲಿಗೆ ಉತ್ಪಾದಕರು, ಅಂದರೆ ಆ ವಸ್ತುವಿನ ತಯಾರಕರು. ಆ ನಂತರದಲ್ಲಿ ಸಗಟು ಮಾರಾಟಗಾರರು, ಅದಾದ ಮೇಲೆ ಚಿಲ್ಲರೆ ಮಾರಾಟಗಾರರು (ರೀಟೇಲರ್). ಕೊನೆಗೆ ಗ್ರಾಹಕರನ್ನು ತಲುಪುತ್ತದೆ. ಹೀಗೆ ವಿವಿಧ ಹಂತವನ್ನು ದಾಟುವಾಗ ವಿಧಿಸುವ ಶುಲ್ಕ ಅಥವಾ ದರ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನು ಸೂಚಿಸುವುದಕ್ಕೆ ಬಳಸುವ ಮಾನದಂಡವನ್ನೇ ಸಗಟು ದರ ಸೂಚ್ಯಂಕ ಎನ್ನಲಾಗುತ್ತದೆ.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ