Breaking News

ಕ್ಷಮೆ ಕೇಳಲಿ ಎಂದ ರೋಹಿಣಿ ಸಿಂಧೂರಿಗೆ ಪ್ರಶ್ನೆಗಳ ಸುರಿಮಳೆಗೈದ ಶಾಸಕ ಸಾರಾ ಮಹೇಶ್!

Spread the love

ಮೈಸೂರು: ಚಾಮರಾಜನಗರ ಆಕ್ಸಿಜನ್​ ದುರಂತ ನಡೆದಾಗ ನನ್ನ ವಿರುದ್ಧ ಆರೋಪ ಮಾಡಿದವರು ಕ್ಷಮೆ ಕೇಳಲಿ ಎಂಬ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆಗೆ ಮಾಜಿ ಸಚಿವ ಸಾ.ರಾ. ಮಹೇಶ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ​

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಾ.ರಾ. ಮಹೇಶ್​, ಒಬ್ಬ ಕನ್ನಡಿಗ ದಲಿತ ಡಿಸಿಯನ್ನು ಕೇವಲ 28 ದಿನಕ್ಕೆ ವರ್ಗಾವಣೆ ಮಾಡಿಸಿದ್ದು ಸುಳ್ಳಾ? ಎಂದು ಪ್ರಶ್ನೆಯನ್ನು ಆರಂಭಿಸಿದರು.

ಪ್ರಶ್ನೆಗಳ ಸವಾಲನ್ನು ಮುಂದುವರಿಸಿದ ಸಾ.ರಾ.ಮಹೇಶ್​, ಹಾಸನದ ಪ್ರಕರಣದಲ್ಲಿ ತಕ್ಷಣ ನಿಮ್ಮ ಪರ ತೀರ್ಪು ಬಂತು. ಈಗ ಅದರ ತೀರ್ಪು ಬರದಂತೆ ಸಿಎಟಿ ಮ್ಯಾನೇಜ್ ಮಾಡಿದ್ದು ಸುಳ್ಳಾ? ವಾಲ್ಮೀಕಿ ಜಯಂತಿ ಆಚರಣೆಗೆ ಬರಲಿಲ್ಲ. ಬದಲಾಗಿ ಬಂಡೀಪುರಕ್ಕೆ ಹೋಗಿದ್ದು ಸುಳ್ಳಾ? ಎಂದು ಪ್ರಶ್ನೆ ಮಾಡಿದರು.

ಮಾತ್ರೆ ಕೊಡಲು ದುಡ್ಡಿಲ್ಲ. ಕರೊನಾ ಸಂದರ್ಭದಲ್ಲಿ ಇನ್ ಡೋರ್ ಜಿಮ್, ಸ್ವಿಮ್ಮಿಂಗ್ ಪೂಲ್ ಕಟ್ಟಿಸಿರುವುದು ಸುಳ್ಳಾ? ಅದು ಪಾರಂಪರಿಕ ಕಟ್ಟಡದಲ್ಲಿ ಈಜುಕೊಳಕ್ಕೆ ಅನುಮತಿ ಕೊಟ್ಟವರು ಯಾರು? ಇದಕ್ಕೆ ಹಣ ಎಲ್ಲಿಂದ ಬಂತು? ಅದು ಕಟ್ಟಿರೋದು ಸುಳ್ಳಾ? ರಾಜ್ಯದ ಸಿಎಂ ಮತ್ತು ರಾಷ್ಟ್ರದ ಪಿಎಂ ಮನೆಯಲ್ಲಿ ಈಜುಕೊಳ ಇದೆಯಾ? ರಾಜ್ಯ ಮುಖ್ಯ ಕಾರ್ಯದರ್ಶಿ ಮನೆಯಲ್ಲಿ ಇದೆಯಾ? ನಾವು-ನೀವು ಜನರಿಗೆ ಮಾದರಿಯಾಗಿರಬೇಕು ಎಂದು ಸಲಹೆ ನೀಡಿದರು.

ಕರ್ನಾಟಕದ ಹಣ ತಿರುಪತಿಗೆ ಕೊಟ್ಟಿದ್ದು ಸುಳ್ಳಾ? ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯ ಹೊತ್ತಿ ಉರಿದಿದ್ದು ಸುಳ್ಳಾ? ಈಜುಕೊಳದ 50 ಲಕ್ಷ ರೂ. ಕರೊನಾಗೆ ಬಳಸಬೇಕಿತ್ತು. ನಿಮ್ಮನ್ನು ಯಾರೂ ಪ್ರಶ್ನೆ ಮಾಡಲೇಬಾರದ? ಇಂತಹ ಪರಿಸ್ಥಿತಿಯಲ್ಲೂ ಮೈಸೂರಿನಲ್ಲಿ ಶಾಸಕರು, ಪಾಲಿಕೆ ಸದಸ್ಯರು ಕೆಲಸ ಮಾಡುತ್ತಿರುವುದಕ್ಕೆ ಕೇಳಬೇಕಾ? ಇದಕ್ಕೆ ಸೂಕ್ತ ವೇದಿಕೆಯಲ್ಲಿ ತಕ್ಕ ಉತ್ತರ ನೀಡುವೆ ಎಂದು ಸವಾಲು ಎಸೆದರು.

ಇದೆಲ್ಲ ಏನೇ ಇರಲಿ ನೊಂದವರ ನಿಟ್ಟುಸಿರು ತಟ್ಟದೆ ಬಿಡುವುದಿಲ್ಲ ಎಂದು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಸಿಡಿಮಿಡಿಗೊಂಡರು.


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ