Breaking News

ಶ್ರೀಗಳೊಬ್ಬರು ಭಕ್ತರು, ಮಠ ದೂರ ಉಳಿದು ಹೊಲಗದ್ದೆಯಲ್ಲಿ ಕುರಿ ಕಾಯತೊಡಗಿದ್ದಾರೆ‌.

Spread the love

ಹಾವೇರಿ : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಕ್ತರ ಹಾಗೂ ತಮ್ಮ ಆರೋಗ್ಯದ ಸುರಕ್ಷತೆಗಾಗಿ ಶ್ರೀಗಳೊಬ್ಬರು ಭಕ್ತರು, ಮಠ ದೂರ ಉಳಿದು ಹೊಲಗದ್ದೆಯಲ್ಲಿ ಕುರಿ ಕಾಯತೊಡಗಿದ್ದಾರೆ‌.

ಹೌದು. ಹಾವೇರಿ ಜಿಲ್ಲೆಯ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಅವರು ಕಳೆದ ಕೆಲ ದಿನಗಳಿಂದ ಮಠ ತೊರೆದು ಕುರಿಗಳನ್ನ ಕಾಯುತ್ತಿದ್ದಾರೆ.

ಕೊರೊನಾ ಸಂಕಷ್ಟದಲ್ಲಿ ಕಾಗಿನೆಲೆ ಕನಕ ಗುರುಪೀಠ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಮತ್ತು ಬಳ್ಳಾರಿ ಜಿಲ್ಲೆಯ ಮೈಲಾರದ ಶಾಖಾ ಮಠಗಳಿಗೆ ನಿತ್ಯ ನೂರಾರು ಭಕ್ತರ ಆಗಮಿಸುತ್ತಿದ್ದಾರೆ.

ಭಕ್ತರಿಗೆ ಕೊರೊನಾ ಹೆಚ್ಚಳದಿಂದ ಮಠಕ್ಕೆ ಆಗಮಿಸದಂತೆ ಶ್ರೀಗಳು ಮನವಿ ಮಾಡಿಕೊಂಡರು ಸಹ ಭಕ್ತರು ಪ್ರತಿ ಆಗಮಿಸುತ್ತಿದ್ದಾರೆ‌. ಇದರಿಂದ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಿ ಕುರಿ ಪಾಲನೆಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮುಂದಾಗಿದ್ದಾರೆ.

ಮಠಕ್ಕೆ ಸೇರಿದ ಸುಮಾರು 300ಕ್ಕೂ ಹೆಚ್ಚು ಕುರಿಗಳನ್ನು ಬಳ್ಳಾರಿ ಜಿಲ್ಲೆಯ ಮೈಲಾರ ಅಡವಿಯಲ್ಲಿ ಉಳಿದುಕೊಂಡು ನಿರಂಜನಾನಂದ ಪುರಿ ಸ್ವಾಮೀಜಿ ಕುರಿ ಮೇಯಿಸುತ್ತಿದ್ದಾರೆ.,


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ