Breaking News

ಮೆಜೆಸ್ಟಿಕ್‍ನಲ್ಲಿ ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ ಕಟ್ಟಡಗಳು!

Spread the love

ಬೆಂಗಳೂರು: ಕಪಾಲಿ ಚಿತ್ರಮಂದಿರದವರು ಮಾಡಿದ ಎಡವಟ್ಟಿನಿಂದ ಸಿಲಿಕಾನ್ ಸಿಟಿಯ ಮೆಜೆಸ್ಟಿಕ್ ನಲ್ಲಿ ಎರಡು ಕಟ್ಟಡಗಳು ಬಿದ್ದು ನೆಲಸಮವಾಗಿವೆ.

ಇತ್ತೀಚೆಗೆ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಮಲ್ಟಿಪ್ಲೆಕ್ಸ್ ಕಟ್ಟಡ ನಿರ್ಮಿಸಲು ಕಪಾಲಿ ಥಿಯೇಟರ್ ಅನ್ನು ಒಡೆದು ಹಾಕಲಾಗಿತ್ತು. ಈಗ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಹೊಸ ಮಲ್ಟಿಪ್ಲೆಕ್ಸ್ ಕಟ್ಟಡ ಕಟ್ಟಲಾಗುತ್ತದೆ. ಆದರೆ ಈ ಕಟ್ಟಡ ನಿರ್ಮಿಸಲು 80 ಅಡಿ ಆಳದಲ್ಲಿ ಗುಂಡಿ ತೆಗೆಯಲಾಗಿದೆ.

ಮಲ್ಟಿಪ್ಲೆಕ್ಸ್ ಕಟ್ಟಡಕ್ಕೆ ಅಡಿಪಾಯ ಹಾಕಲು 80 ಅಡಿ ಆಳವಾಗಿ ಗುಂಡಿಯನ್ನು ತೆಗೆಯಲಾಗಿತ್ತು. ಪರಿಣಾಮ ಪಕ್ಕದಲ್ಲಿ ಇದ್ದ ಕಟ್ಟಡಗಳಿಗೆ ಹಾನಿಯಾಗಿತ್ತು. ಕಟ್ಟಡ ಪಕ್ಕ ಆಳವಾದ ಗುಂಡಿ ತೆಗೆದ ಕಾರಣ ಕಟ್ಟಡಗಳು ಬಿರುಕು ಬಿಟ್ಟಿದ್ದವು. ಸಂಜೆ ವೇಳೆಗೆ ಪಕ್ಕದಲ್ಲಿದ್ದ ಎರಡು ಕಟ್ಟಡಗಳು ನೋಡ ನೋಡುತ್ತಿದ್ದಂತೆ ನೆಲಸಮವಾಗಿವೆ. ಈ ದೃಶ್ಯ ಮೊಬೈಲ್ ಕ್ಯಾಮೆರದಲ್ಲಿ ಸೆರೆಯಾಗಿದೆ.

ಈಗ ಕಟ್ಟಡ ಕಪಾಲಿ ಥಿಯೇಟರ್ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಿದ್ದಿದ್ದು, ಅದರ ಅಡಿಯಲ್ಲಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಲ್ಟಿಪ್ಲೆಕ್ಸ್ ಕಟ್ಟಡ ಕಾಮಗಾರಿ ರಾತ್ರಿ ವೇಳೆಯೂ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಹೀಗಾಗಿ ಕಟ್ಟಡ ಬಿದ್ದ ಸಮಯದಲ್ಲಿ ಅಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.


Spread the love

About Laxminews 24x7

Check Also

ಗಣೇಶ ಮೂರ್ತಿಗಳ ವಿಸರ್ಜನೆಗೆ ಸಚಿವ ಸತೀಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಸೂಕ್ತ ವ್ಯವಸ್ಥೆ ಮಲಗೌಡಾ ಪಾಟೀಲ ಸೂಚನೆ …

Spread the love ಗಣೇಶ ಮೂರ್ತಿಗಳ ವಿಸರ್ಜನೆಗೆ ಅಳತಗಾ ಸೇತುವೆ ಸಿದ್ಧತೆಗೆ ಅಗತ್ಯ ಕ್ರಮಕ್ಕೆ ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ