ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಿಂತು ರಾಷ್ಟವ್ಯಾಪಿ ಲಸಿಕಾ ಉತ್ಸವ ನಡೆಯಬೇಕು ಎಂದು ಕರೆಕೊಟ್ಟರು. ಆದರೆ ಇದೀಗ ಅದೇ ದೆಹಲಿಯಲ್ಲಿ ಲಸಿಕೆಯ ಅಭಾವ ಉಂಟಾಗಿ 100 ಹೆಚ್ಚು ಲಸಿಕಾ ಕೇಂದ್ರಗಳು ಮುಚ್ಚಿಹೋಗಿವೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಂಗ್ರಿಸಲಾಗಿದ್ದ ಎಲ್ಲ ಲಸಿಕೆಗಳು ಖಾಲಿಯಾದ್ದರಿಂದ ನಗರದ 100 ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ಮುಚ್ಚುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಉತ್ಪಾದನಾ ಕಂಪನಿಗಳಿಗೆ ಅಗತ್ಯವಿರುವ 67 ಲಕ್ಷ ಲಸಿಕೆ ಬೇಕು ಎಂದು ಮನವಿ ಮಾಡಿದ್ದೆವು. ಆದರೆ ಇಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಎರಡೂ ಕಂಪನಿಗಳು ಹೇಳಿವೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.
Laxmi News 24×7