Breaking News

ಕುತೂಹಲಕ್ಕೆ ಕಾರಣವಾಗಿದೆ ಆಕಾಶದಲ್ಲಿ ಕಂಡುಬಂದ ವಿಚಿತ್ರ ಆಕೃತಿ.!

Spread the love

ಕಳೆದ ವರ್ಷ ಜನವರಿ ತಿಂಗಳಲ್ಲಿ ಲಾಹೋರ್​​ನಲ್ಲಿ ವಿಚಿತ್ರವಾದ ಕಪ್ಪು ಬಣ್ಣದ ವರ್ತುಲ ಆಕಾಶದಲ್ಲಿ ಕಾಣಿಸಿಕೊಂಡ ಘಟನೆ ನಿಮಗೆ ನೆನಪಿದ್ದಿರಬಹುದು. ಈ ದೃಶ್ಯದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವಿವಿಧ ವೇದಿಕೆಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಅನೇಕರು ಇದನ್ನ ಹಾರುವ ತಟ್ಟೆ ಇರಬಹುದು ಎಂದು ಭಾವಿಸಿದ್ದರು. ಆದರೆ ಬಳಿಕ ತಜ್ಞರು ಈ ಬಗ್ಗೆ ಸಂಶೋಧನೆ ನಡೆಸಿ ಇದೊಂದು ಕೈಗಾರಿಕಾ ಪ್ರದೇಶದಲ್ಲಿ ಆದ ಸಮಸ್ಯೆಯಿಂದಾಗಿ ಈ ರೀತಿ ದೃಶ್ಯ ಕಂಡಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಕಳೆದ ವಾರ ಕೂಡ ಸೆಕ್ಯೂರಿಟಿ ಕ್ಯಾಮರಾವೊಂದರಲ್ಲಿ ಇದೇ ರೀತಿಯ ಕಪ್ಪು ಬಣ್ಣದ ವರ್ತುಲ ಆಕಾಶದಲ್ಲಿ ಕಂಡು ಬಂದಿರುವ ದೃಶ್ಯ ಸೆರೆಹಿಡಿಯಲಾಗಿದೆ. ಈ ವಿಡಿಯೋ ಸಹ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ್ದು ಪ್ರತಿ ಬಾರಿಯಂತೆಯೇ ಈ ಬಾರಿಯೂ ಸಹ ಇದೊಂದು ಹಾರುವ ತಟ್ಟೆ ಆಗಿರಬಹುದೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋದ ಸಣ್ಣ ತುಣುಕನ್ನ ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾಗಿದೆ. ಇನ್ನೊಂದು ಕ್ಯಾಮರಾದಲ್ಲಿ ಸೆರೆಯಾದ ಇದೇ ದೃಶ್ಯದಲ್ಲಿ ಕಪ್ಪು ಬಣ್ಣದ ವರ್ತುಲ ಆಕಾಶದಲ್ಲಿ ತೇಲುತ್ತಿರೋದನ್ನ ಕಾಣಬಹುದಾಗಿದೆ. ಈ ವಿಡಿಯೋ ಟಿಕ್​ಟಾಕ್​ನಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕರು ಇದೂ ಸಹ ಹಾರುವ ತಟ್ಟೆಯೇ ಇರಬೇಕು ಎಂದು ಅಂದಾಜಿಸಿದ್ದಾರೆ.

ಆದರೆ ತಜ್ಞರು ಇದು ಹಾರುವ ತಟ್ಟೆ ಆಗಿರೋಕೆ ಸಾಧ್ಯವಿಲ್ಲ ಎಂದು ಅಂದಾಜಿಸಿದ್ದಾರೆ. ಈ ರೀತಿಯ ಅನೇಕ ದೃಶ್ಯಗಳು ತೀರಾ ಇತ್ತೀಚಿಗೆ ವಿಶ್ವದ ಕೆಲ ಪ್ರದೇಶಗಳಲ್ಲಿ ಕಂಡುಬಂದಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ತಜ್ಞರು ಈ ಹೇಳಿಕೆ ನೀಡಿದ್ದಾರೆ.

ಎಲೆಕ್ಟ್ರಿಕ್​ ಟ್ರಾನ್ಸ್​ಫೋರ್ಮರ್​ ಬಾಕ್ಸ್ ಸ್ಫೋಟಗೊಂಡರೂ ಸಹ ಈ ರೀತಿ ಕಪ್ಪು ವರ್ತುಲ ಕಾಣಿಸಿಕೊಳ್ಳುತ್ತೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ