Breaking News

ಆಕ್ಸಿಜನ್​ ದುಬಾರಿ ಬೆಲೆಗೆ ಮಾರಾಟ: ಆರೋಪಿ ಅರೆಸ್ಟ್​​

Spread the love

ಬೆಂಗಳೂರು: ಕೊರೊನಾ ಬಿಕ್ಕಟ್ಟು ಕೆಲ ಖದೀಮರ ಪಾಲಿಗೆ ಬಂಡವಾಳವಾಗಿ ಬಿಟ್ಟಿದ್ದೆ. ರಾಜ್ಯದಲ್ಲಿ ಬೆಡ್​ ಹಾಗೂ ರೆಮಿಡಿಸಿವರ್​​ನ್ನ ಕಾಳಸಂತೆಯಲ್ಲಿ ಮಾರಿದ್ದಾಯ್ತು. ಇದೀಗ ಪ್ರಾಣವಾಯುವಿನ ಮೇಲೆ ಖದೀಮರ ಕಣ್ಣು ಬಿದ್ದಿದೆ.

ನಗರದಲ್ಲಿ ದುಬಾರಿ ಬೆಲೆಗೆ ಆಕ್ಷಿಜನ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್ ಬಂಧಿತ ಆರೋಪಿ

ಖಾಸಗಿ ಗ್ಯಾಸ್​ ಏಜೆನ್ಸಿಯಲ್ಲಿ ಬ್ರಾಂಚ್​ ಇನ್ಚಾರ್ಜ್​ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಆಕ್ಸಿಜನ್​ನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. 47‌ಲೀಟರ್ ಆಕ್ಸಿಜನ್​ಗೆ ಸರ್ಕಾರ 300ರೂಪಾಯಿ ನಿಗದಿ ಮಾಡಿದೆ. ಆದರೆ ಆರೋಪಿ 3,000 ರೂಪಾಯಿಗೆ ಮಾರಾಟ ಮಾಡುತ್ತಿದ್ದು, ಸಿಸಿಬಿ ಕಾರ್ಯಾಚರಣೆ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ.

ಸದ್ಯ ರವಿಕುಮಾರ್​​ನನ್ನ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ಆರೋಪಿ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ