ಧಾರವಾಡ: ಹೆಚ್. ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ತ್ಯಾಗ ಮಾಡಿ ಬಂದವರು. ಈ ಸರ್ಕಾರ ರಚನೆಗೆ ಅವರ ಸಹಕಾರ ಬಹಳ ಸಿಕ್ಕಿದೆ. ಅವರಿಗೆ ಸಚಿವ ಸ್ಥಾನ ಸಿಕ್ಕರೆ ಒಳ್ಳೆಯದು ಎಂದು ಅಲ್ಪ ಸಂಖ್ಯಾತ ಇಲಾಖೆಯ ಸಚಿವ ಶ್ರೀಮಂತ ಪಾಟೀಲ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಪಕ್ಷದ ಮುಖಂಡರು ಎಲ್ಲ ಸರಿ ಪಡಿಸ್ತಾರೆ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ತಾರೆ ಎಂದು ಹೇಳಿದರು.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆದವರು ಅಸಮಾಧಾನದ ವಿಚಾರವಾಗಿ ಮಾತನಾಡಿದ ಸಚಿವರು, ನಮ್ಮ ಮುಖಂಡರು ಎಲ್ಲರ ಜೊತೆಯಲ್ಲಿ ಚರ್ಚೆ ಮಾಡ್ತಾರೆ. ಅದರಲ್ಲಿ ಏನೂ ಸಮಸ್ಯೆ ಇಲ್ಲಾ ಎಂದರು.
ಇದೇ ವೇಳೆ ಕೊರೊನಾ ಕಿಟ್ ಖರೀದಿಯಲ್ಲಿ ಅವ್ಯವಹಾರ ಬಗ್ಗೆ ಮಾತನಾಡಿ, ವಿರೋಧ ಪಕ್ಷದವರು ಆರೋಪ ಮಾಡುವವರೇ, ಬೇರೆ ಏನ್ ಮಾಡ್ತಾರೆ. ಏನೂ ಇಲ್ಲದೇ ಇರುವಾಗ ತನಿಖೆ ಮಾಡಿ ಏನು ಮಾಡುವುದು. ಎಲ್ಲ ಆರೋಪಗಳಿಗೆ ತನಿಖೆ ಕೊಡೋಕೆ ಆಗಲ್ಲ. ರಾಜ್ಯಕ್ಕೆ ಬೇಕಾದ ವಿಷಯ ಇದ್ದರೆ ತನಿಖೆ ಮಾಡಬಹುದು ಎಂದು ಶ್ರೀಮಂತ ಪಾಟೀಲ್ ಹೇಳಿದರು.