Breaking News

ಹಳೆ ವೃತ್ತಿ ಗಾರೆ ಕೆಲಸಕ್ಕೆ ಮರಳಿದ ನಟ ಚಿಕ್ಕಣ್ಣ!

Spread the love

ನಟ ಚಿಕ್ಕಣ್ಣ ಕನ್ನಡ ಚಿತ್ರರಂಗದ ಬ್ಯುಸಿ ಹಾಸ್ಯನಟರಲ್ಲಿ ಒಬ್ಬರು. ಕುರಿಬಾಂಡ್ ಕಾರ್ಯಕ್ರಮದಿಂದ ನಟನೆ ಆರಂಭಿಸಿದ ಚಿಕ್ಕಣ್ಣ ಇಂದಿನ ಈ ಹಂತಕ್ಕೆ ಏರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಸಾಮಾನ್ಯ ಕುಟುಂಬದಿಂದ ಬಂದಿರುವ ಚಿಕ್ಕಣ್ಣ ಮೊದಲು ಜೀವನಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದರು. ಮೇಸ್ತ್ರಿ ಕೈಕೆಳಗೆ ದಿನಗೂಲಿಗೆ ಮನೆಗಳ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಚಿಕ್ಕಣ್ಣ ನಟನಾಗುವ ಉದ್ದೇಶದಿಂದ ಬೆಂಗಳೂರಿಗೆ ಬಂದು ಹಲವು ಸುತ್ತು ಸೈಕಲ್ ಹೊಡೆದ ಬಳಿಕ ಇಂದಿನ ಸ್ಥಿತಿಗೆ ತಲುಪಿದ್ದಾರೆ.

ಆದರೆ ಚಿಕ್ಕಣ್ಣ ಮತ್ತೆ ತಮ್ಮ ಹಳೆ ವೃತ್ತಿಗೆ ಮರಳಿದ್ದಾರೆ. ಹೌದು, ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿದ್ದಾರೆ. ಆದರೆ ಬೇರೆಯವರ ಮನೆಯ ಗಾರೆ ಕೆಲಸ ಅಲ್ಲ ಬದಲಿಗೆ ತಮ್ಮದೇ ತೋಟದ ಮನೆಯ ಗಾರೆ ಕೆಲಸ ಮಾಡುತ್ತಿದ್ದಾರೆ.

ಮೈಸೂರಿನ ಬಳಿ ದೊಡ್ಡ ಫಾರ್ಮ್ ನಿರ್ಮಿಸಿರುವ ಚಿಕ್ಕಣ್ಣ ಅಲ್ಲಿಯೇ ಸಣ್ಣದೊಂದು ಮನೆ ನಿರ್ಮಾಣ ಮಾಡುತ್ತಿದ್ದು, ಮನೆ ನಿರ್ಮಾಣ ಕಾರ್ಯಕ್ಕೆ ತಾವೇ ಕೈ ಜೋಡಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಚಿತ್ರೀಕರಣ ಇಲ್ಲದ ಕಾರಣ ಸಮಯದ ಸದುಪಯೋಗಕ್ಕಾಗಿ ತಾವು ಗಾರೆ ಕೆಲಸ ಮಾಡುತ್ತಿದ್ದಾರೆ ಚಿಕ್ಕಣ್ಣ.

ನಟ ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಿಮೆಂಟು ಕಲಸಿ ಗೋಡೆಗೆ ಹಚ್ಚಿ ಸಪಾಟು ಮಾಡುವ ಕಾರ್ಯವನ್ನು ಚಿಕ್ಕಣ್ಣ ಮಾಡುತ್ತಿದ್ದಾರೆ. ಚಿಕ್ಕಣ್ಣನ ಈ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯಾದ್ಯಂತ 50 ಸಾವಿರಕ್ಕೂ ಹೆಚ್ಚು ಕನ್ನಡಿಗರಿಗೆ‌ ಕರವೇ ದೀಕ್ಷೆ: ನಾರಾಯಣಗೌಡ

Spread the loveಬೆಳಗಾವಿ: ಕನ್ನಡ ನಾಡು, ನುಡಿ, ಗಡಿ, ಜಲ ರಕ್ಷಣೆಗಾಗಿ ಜಿಲ್ಲೆಯ 2500ಕ್ಕೂ ಹೆಚ್ಚು ಕಾರ್ಯಕರ್ತರು “ಕನ್ನಡ ದೀಕ್ಷೆ” ಪ್ರತಿಜ್ಞಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ