Breaking News

ಮಣಿಪಾಲ್ ತೆಕ್ಕೆಗೆ ಸೇರಿದ ಕೊಲಂಬಿಯಾ ಏಷ್ಯಾ

Spread the love

ನವದೆಹಲಿ: ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್‌ ಸಮೂಹದ ಭಾರತದಲ್ಲಿನ ಆಸ್ಪತ್ರೆಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಆರೋಗ್ಯಸೇವಾ ವಲಯದ ಪ್ರಮುಖ ಕಂಪನಿಯಾದ ‘ಮಣಿಪಾಲ್ ಹಾಸ್ಪಿಟಲ್ಸ್‌’ ಶುಕ್ರವಾರ ತಿಳಿಸಿದೆ.

ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್‌ನ ಶೇಕಡ 100ರಷ್ಟು ಷೇರುಗಳನ್ನು ಮಣಿಪಾಲ್ ಹಾಸ್ಪಿಟಲ್ಸ್‌ ಖರೀದಿಸಿದೆ. ಈ ಖರೀದಿಯೊಂದಿಗೆ ಮಣಿಪಾಲ್ ಹಾಸ್ಪಿಟಲ್ಸ್ ಸಮೂಹವು ಭಾರತದ ಎರಡನೆಯ ಅತಿದೊಡ್ಡ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳ ಸಮೂಹವಾಗಿ ಹೊರಹೊಮ್ಮಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಆರೋಗ್ಯಸೇವಾ ವಲಯದ ಈ ಎರಡು ಸಂಸ್ಥೆಗಳು (ಮಣಿಪಾಲ್ ಮತ್ತು ಕೊಲಂಬಿಯಾ ಏಷ್ಯಾ) ಒಂದಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದೇವೆ’ ಎಂದು ಮಣಿಪಾಲ್ ಶಿಕ್ಷಣ ಮತ್ತು ಆರೋಗ್ಯ ಸಮೂಹದ ಅಧ್ಯಕ್ಷ ರಂಜನ್ ಪೈ ಹೇಳಿದ್ದಾರೆ.

ಎರಡೂ ಕಂಪನಿಗಳನ್ನು ಒಗ್ಗೂಡಿಸಿದರೆ 14 ನಗರಗಳಲ್ಲಿ ಒಟ್ಟು ಏಳು ಸಾವಿರ ಹಾಸಿಗೆಗಳ ಸಾಮರ್ಥ್ಯದ 26 ಆಸ್ಪತ್ರೆಗಳು, ನಾಲ್ಕು ಸಾವಿರಕ್ಕೂ ಹೆಚ್ಚಿನ ವೈದ್ಯರು ಇದ್ದಾರೆ ಎಂದು ಮಣಿಪಾಲ್ ಹಾಸ್ಪಿಟಲ್ಸ್ ತಿಳಿಸಿದೆ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ