Breaking News

ಆಜ್ ತಕ್ ಸುದ್ದಿ ವಾಹಿನಿಯ ನಿರೂಪಕ ರೋಹಿತ್ ಸರ್ದಾನ ಕೊರೊನಾ ಸೋಂಕಿಗೆ ಬಲಿ

Spread the love

ನವದೆಹಲಿ: ಹಿರಿಯ ಪತ್ರಕರ್ತ, ಆಜ್ ತಕ್ ಸುದ್ದಿ ವಾಹಿನಿಯ ನಿರೂಪಕ ರೋಹಿತ್ ಸರ್ದಾನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ರೋಹಿತ್ ಸರ್ದಾನ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಜ್ ತಕ್ ನಲ್ಲಿ ದಂಗಲ್ ಎಂಬ ಚರ್ಚಾ ಕಾರ್ಯಕ್ರಮದ ಮೂಲಕ ರೋಹಿತ್ ಜನಪ್ರಿಯರಾಗಿದ್ದರು.

ಕೊರೊನಾ ಸೋಂಕಿನಿಂದ ಹಿರಿಯ ಪತ್ರಕರ್ತ, ಸುದ್ದಿ ನಿರೂಪಕ ಸಾವನ್ನಪ್ಪಿರುವುದು ಸಹೋದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಹಿತ್ ಸರ್ದಾನಾ ಸಾವಿಗೆ ಸಂತಾಪ ಸೂಚಿಸಿದ್ದು, ಓರ್ವ ಧೈರ್ಯಶಾಲಿ, ಪಕ್ಷಾತೀತ ವರದಿ ಮಾಡುತ್ತಿದ್ದ ಪತ್ರಕರ್ತನನ್ನು ದೇಶ ಇಂದು ಕಳೆದುಕೊಂಡಿದೆ ಎಂದು ದು:ಖ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹಾರಾಟ ಕಡಿಮೆ: ರಾಜ್ಯಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಆಕ್ರೋಶ

Spread the loveನವದೆಹಲಿ: ಕರ್ನಾಟಕದ ಎರಡನೇ ರಾಜಧಾನಿ ಎಂದೇ ಖ್ಯಾತವಾದ ಬೆಳಗಾವಿ  ನಗರವು ಶಿಕ್ಷಣ, ಉದ್ಯಮ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ