ಬೆಂಗಳೂರು: ಷರತ್ತು ವಿಧಿಸಿ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಅಬಕಾರಿ ಇಲಾಖೆಯಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಮದ್ಯ ಮಾರಾಟ ಮಾಡಬಹುದಾಗಿದೆ.
ಸೀಲ್ಡ್ ಬಾಟಲ್ ಗಳಲ್ಲಿ ಪಾರ್ಸೆಲ್ ನೀಡಬೇಕು. ಎಂಆರ್ಪಿ ದರದಲ್ಲಿ ಮದ್ಯ ಮಾರಾಟ ಮಾಡಬೇಕು. ಗರಿಷ್ಠ ಎರಡು ಲೀಟರ್ ಬಿಯರ್ ಮಾತ್ರ ಖರೀದಿಸಬೇಕು. ಮದ್ಯ ಖರೀದಿ ವೇಳೆ ನೂಕಾಟ ಮಾಡುವಂತಿಲ್ಲ. ಮದ್ಯದಂಗಡಿಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಸೂಪರ್ ಮಾರ್ಕೇಟ್ ಗಳಲ್ಲಿ ಮಧ್ಯಮಾರಾಟ ಇಲ್ಲ. ಹೀಗೆಂದು ಮದ್ಯ ಮಾರಾಟಕ್ಕೆ ಗೈಡ್ಲೈನ್ಸ್ ರಿಲೀಸ್ ಮಾಡಲಾಗಿದೆ. ಮೇ 12 ರ ವರೆಗೆ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
Laxmi News 24×7