Breaking News

ಮೂಗಿಗೆ ನಿಂಬೆ ರಸ ಹಾಕಿದರೆ ಉಸಿರಾಟದ ಸಮಸ್ಯೆ ಪರಿಹಾರವಾಗುತ್ತದೆ: ವಿಜಯ ಸಂಕೇಶ್ವರ

Spread the love

ಹುಬ್ಬಳ್ಳಿ: ಕೋವಿಡ್-19 ಸಂದರ್ಭದಲ್ಲಿ ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿಕೊಳ್ಳುವುದಿಂದ ಅರ್ಧ ಗಂಟೆಯಲ್ಲಿ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಫ ಹೊರ ಬಂದು ಉಸಿರಾಟದ ಸಮಸ್ಯೆ ಸರಿ ಹೋಗಲಿದೆ, ಇದನ್ನು ನಾನು, ನನ್ನ ಕುಟುಂಬ ಹಾಗೂ ಸುಮಾರು 200 ಜನರಿಗೆ ಸೂಚಿಸಿದ್ದೆ ಇದರಿಂದ ಪರಿಣಾಮಕಾರಿ ಫಲಿತಾಂಶ ಬಂದಿದೆ ಎಂದು ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ತಿಳಿಸಿದರು.

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಂಬೆ ಹಣ್ಣಿನ ರಸ ಹಾಕಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಕಂಡಿದ್ದೇನೆ. ದಿನಕ್ಕೆ ಎರಡು ಬಾರಿ 3-4 ಹನಿಗಳನ್ನು ಹಾಕಿಕೊಳ್ಳಬೇಕು. ಹೀಗೆ ಹಾಕಿಕೊಳ್ಳುವುದರಿಂದ 30-45 ನಿಮಿಷದಲ್ಲಿ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಫ ಹೊರ ಬರಲಿದೆ. ಇದರಂದ ಉಸಿರಾಟದ ಪ್ರಮಾಣ ಸಾಮಾನ್ಯ ಸ್ಥಿತಿಗೆ ಬರಲಿದೆ‌ ಇದರಿಂದ ಆಮ್ಲಜನಕದ ಮೇಲಿನ ಒತ್ತಡ ಕಡಿಮೆಯಾಗಿ ಶೇ. 80 ರಷ್ಟು ಆಸ್ಪತ್ರೆ ಹಾಸಿಗೆ ಖಾಲಿಯಾಗಲಿವೆ. ಈ ಮನೆಮದ್ದು ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ತಿಳಿಸಿದರು.

ಈ ವಿಧಾನವನ್ನು ನಾನು, ನಾನು, ನನ್ನ ಕುಟುಬ ಸೇರಿದಂತೆ ಸುಮಾರು 200 ಜನರಿಗೆ ಹೇಳಿದ್ದೇನೆ. 30ರಿಂದ 45 ನಿಮಿಷದಲ್ಲಿ ಕಫ ಹೊರ ಬಂದು ಉಸಿರಾಟ ಸಾಮಾನ್ಯ ಸ್ಥಿತಿಗೆ ಬಂದಿದೆ. ಇದನ್ನರಲ್ಲಿ ಅನುಸರಿಸಿದವರು ವಾಪಸ್ಸು ಕರೆ ಮಾಡಿ ಫಲಿತಾಂಶ ತಿಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರು ಇದನ್ನು ಅನುಸರಿಸುವುದರಿಂದ ಆಮ್ಲಜನಕದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಈ ವಿಧಾನದ ಅನುಸರಿಸುವ ಜತೆಗೆ ವೈದ್ಯಕೀಯ ಸಲಹೆ, ಚಿಕಿತ್ಸೆ ಅನುಸರಿಸಿಬೇಕು ಎಂದು ತಿಳಿಸಿದರು.

ಉಚಿತ ಘೋಷಣೆ ಸರಿಯಲ್ಲ: ಕೇಂದ್ರ ಹಾಗೂ ರಾಜ್ಯ ಸರಕಾರ ಉಚಿತ ಪಡಿತರ ಘೋಷಣೆ ಮಾಡಿ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದಾರೆ. ಇದರಿಂದ ಬಹುತೇಕ ಕೈಗಾರಿಕೆಗಳು ಕಾರ್ಮಿಕ ಸಮಸ್ಯೆ ಅನುಭವಿಸುತ್ತಿವೆ. ಪ್ರಧಾನಿ ನರೆಂದ್ರ ಮೋದಿಯವರು 80 ಕೋಟಿ ಜನರಿಗೆ ಉಚಿತ ಪಡಿತರ ಘೋಷಣೆ ಸರಿಯಲ್ಲ. ಕಡು ಬಡವರನ್ನು ಗುರುತಿಸಿ ತಲುಪಿಸುವ ವ್ಯವಸ್ಥೆ ಮಾಡಬೇಕಿತ್ತು. ಇನ್ನೂ ಇಂತಹ ಸಂದರ್ಭದಲ್ಲಿ ಚುನಾವಣಾ ರ್ಯಾಲಿ, ಕುಂಬ ಮೇಳ ಸರಿಯಲ್ಲ. ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿವೆ. ಈ ಸಂದರ್ಭದಲ್ಲಿ ಜನರು ಜಾಗೃತಿಯಿಂದ ಇರಬೇಕು ಎಂದು ಸಂಕೇಶ್ವರ ಹೇಳಿದರು.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ