ನವದೆಹಲಿ: ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ಆಮ್ಲಜನಕ ಪೂರೈಕೆಯಲ್ಲಿ ಅಡಚಣೆಯನ್ನು ಉಂಟು ಮಾಡಿದ್ರೆ, ‘ನಾವು ಆ ವ್ಯಕ್ತಿಯನ್ನ ಗಲ್ಲಿಗೇರಿಸುತ್ತೇವೆ’ ಎಂದು ದೆಹಲಿ ಹೈಕೋರ್ಟ್ ಶನಿವಾರ ಹೇಳಿದೆ.
ಮಹಾರಾಜ ಅಗ್ರಸೆನ್ ಆಸ್ಪತ್ರೆಯ ಅರ್ಜಿಯ ವಿಚಾರಣೆಯ ನಡೆಸಿದ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ರೇಖಾ ಪಲ್ಲಿ ಅವ್ರ ನ್ಯಾಯಪೀಠ ಈ ಹೇಳಿಕೆ ನೀಡಿದೆ.
ಗಂಭೀರ ಅನಾರೋಗ್ಯದ ಕೊರೊನಾ ರೋಗಿಗಳಿಗೆ ಆಮ್ಲಜನಕದ ಕೊರತೆಯ ಬಗ್ಗೆ ಆಸ್ಪತ್ರೆ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಆಮ್ಲಜನಕದ ಸರಬರಾಜನ್ನ ತಡೆಯಲು ಯಾರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸುವಂತೆ ನ್ಯಾಯಾಲಯ ದೆಹಲಿ ಸರ್ಕಾರವನ್ನ ಕೇಳಿದೆ. ಇನ್ನು ಇದೇ ವೇಳೆ ಯಾರಾದ್ರು ಆಮ್ಲಜನಕದ ಪೂರೈಕೆಯನ್ನು ನಿಲ್ಲಿಸಲು ಪ್ರಯತ್ನಿಸಿದರೆ, ನಾವು ಆ ವ್ಯಕ್ತಿಯನ್ನ ಗಲ್ಲಿಗೇರಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ.
ಯಾರನ್ನೂ ಬಿಡಲಾಗುವುದಿಲ್ಲ..!
‘ನಾವು ಯಾರನ್ನೂ ಬಿಡುವುದಿಲ್ಲ’ ಎಂದಿರುವ ನ್ಯಾಯಪೀಠ, ಸ್ಥಳೀಯ ಆಡಳಿತದ ಅಂತಹ ಅಧಿಕಾರಿಗಳ ಬಗ್ಗೆ ಕೇಂದ್ರಕ್ಕೆ ತಿಳಿಸುವಂತೆ ದೆಹಲಿ ಸರ್ಕಾರವನ್ನ ನ್ಯಾಯಾಲಯ ಕೇಳಿದೆ. ಇದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು. ಇನ್ನು ದೆಹಲಿಗೆ ದಿನಕ್ಕೆ 480 ಮೆಟ್ರಿಕ್ ಟನ್ ಆಮ್ಲಜನಕ ಯಾವಾಗ ಸಿಗುತ್ತದೆ? ಎಂದು ಕೇಂದ್ರ ಸರ್ಕಾರವನ್ನ ಪ್ರಶ್ನಿಸಿದೆ.
ನ್ಯಾಯಾಲಯವು, ‘ನೀವು (ಕೇಂದ್ರ 21) ಪ್ರತಿದಿನ 480 ಮೆಟ್ರಿಕ್ ಟನ್ ಆಮ್ಲಜನಕವನ್ನ ದೆಹಲಿಗೆ ತಲುಪಿಸುವ ಭರವಸೆ ನೀಡಿದ್ದೀರಿ. ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿ? ‘ ಕಳೆದ ಕೆಲವು ದಿನಗಳಿಂದ ಪ್ರತಿದಿನ ಕೇವಲ 380 ಮೆಟ್ರಿಕ್ ಟನ್ ಆಮ್ಲಜನಕವನ್ನ ಪಡೆಯುತ್ತಿದೆ ಮತ್ತು ಶುಕ್ರವಾರ ಸುಮಾರು 300 ಮೆಟ್ರಿಕ್ ಟನ್ ಆಮ್ಲಜನಕವನ್ನ ಪಡೆದಿದೆ ಎಂದು ದೆಹಲಿ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಇದರ ನಂತರ ನ್ಯಾಯಾಲಯ ಕೇಂದ್ರವನ್ನ ಪ್ರಶ್ನಿಸಿದೆ.