Breaking News

ಬಸ್ಸಿನಿಂದ ಕೆಳಗಿಳಿಸಿದ ಉಡುಪಿ ಡಿಸಿ: ವಿದ್ಯಾರ್ಥಿನಿಯ ಆಕ್ರೋಶ; ವಿಡಿಯೋ ವೈರಲ್

Spread the love

ಉಡುಪಿ, ಏಪ್ರಿಲ್ 20: ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಕೆಳಗಿಳಿಸಿದ ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಆಕ್ರೋಶ ಹೊರಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಉಡುಪಿಯ ಸಂತೆಕಟ್ಟೆ ಬಳಿ ಬಸ್ ಅಡ್ಡಗಟ್ಟಿ ತಪಾಸಣೆ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ವಿಪರೀತ ಪ್ರಯಾಣಿಕರನ್ನು ತುಂಬಿದ್ದಕ್ಕೆ ಸ್ಥಳದಲ್ಲೇ ಚಾಲಕನಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಉಡುಪಿ, ಮಣಿಪಾಲ ನಗರದಲ್ಲಿ ಪ್ರತಿನಿತ್ಯ ನೂರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಜನತೆ ಕೋವಿಡ್ ನಿಯಮಾವಳಿ ಪಾಲಿಸುವಂತೆ ಜಾಗೃತಿ ಮೂಡಿಸುತ್ತಲೇ ಇದೆ.‌

ಈ ಮಧ್ಯೆಯೂ ಖಾಸಗಿ ಬಸ್ಸುಗಳು ವಿಪರೀತ ಪ್ರಯಾಣಿಕರನ್ನು ಹೇರಿಕೊಂಡು ಹೋಗುತ್ತಿದ್ದು, ಹೆಚ್ಚಿನ ಪ್ರಯಾಣಿಕರಲ್ಲಿ ಮಾಸ್ಕ್ ಮರೆಯಾಗಿದೆ, ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲವಾಗಿದ್ದು, ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಬಸ್‌ ತಡೆದು ನಿಲ್ಲಿಸಿ ಬಾಗಿಲಿನಲ್ಲಿ ಮತ್ತು ಒಳಗೆ ನಿಂತಿರುವವರನ್ನು ತಾವೇ ಖುದ್ದಾಗಿ ಇಳಿಸಿ, ಕಂಡಕ್ಟರ್ ಅವರಿಂದ ಹಣವನ್ನು ವಾಪಸು ನೀಡಿ ಕಳುಹಿಸಿದರು. ಬಳಿಕ ಚಾಲಕ, ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಆಕ್ರೋಶ ಹೊರಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಬಸ್‌ನಿಂದ ಕೆಳಗೆ ಇಳಿದ ವಿದ್ಯಾರ್ಥಿನಿ, ಜಿಲ್ಲಾಧಿಕಾರಿ ನಮ್ಮನ್ನು ಇಳಿಸಿ ಹೋಗಿದ್ದಾರೆ, ನಂತರ ಬರುವ ಬಸ್‌ನಲ್ಲೂ ಕೂಡ ಹೆಚ್ಚಿನ ಪ್ರಯಾಣಿಕರು ಇರ್ತಾರೆ. ಮನೆ ತುಂಬಾ ದೂರವಿದೆ. ಕತ್ತಲಾಗುತ್ತಿದೆ ನಾವು ಹೇಗೆ ಹೋಗೋದು ಅಂತ ಆಕ್ರೋಶ ಹೊರ ಹಾಕಿದ್ದಾಳೆ. ಸದ್ಯ ವಿಡಿಯೋ ವೈರಲ್ ಆಗಿ ಜಿಲ್ಲಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ