ಬೆಂಗಳೂರು: ಲಾಕ್‍ಡೌನ್ ಮಾಡಿದ್ರೆ ಜನರು ಸಾಯ್ತಾರೆ. ಅದರ ಬದಲಾಗಿ ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿಗೆ ತರಬೇಕು. ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರ ಅಲ್ಲ ಎಂದು ಕಾಂಗ್ರೆಸ್ ಎಂಎಲ್‍ಸಿ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಲಾಕ್‍ಡೌನ್ ಪರಿಹಾರ ಅಲ್ಲ: ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರ ಅಲ್ಲ. ಲಾಕ್‍ಡೌನ್ ಮಾಡುವ ಬದಲು ಸೆಕ್ಷನ್ 144 ಹಾಕಿ, ನಾಲ್ಕಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ ಎಂಬ ಕಠಿಣ ನಿಯಮ ಜಾರಿಯಾಗಬೇಕು. ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯಿಂದ ಸೋಂಕು ಹರಡಲ್ಲ ಅನ್ನೋದು ತಜ್ಞರ ಅಭಿಪ್ರಾಯ. ಈ ರೀತಿ ಎಲ್ಲ ತಜ್ಞರ ಅಭಿಪ್ರಾಯ ಕ್ರೋಢಿಕರಿಸಿ ಜನರಿಗೆ ಕುಟುಂಬಸ್ಥರಿಗೆ ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ರಸ್ತೆ ರಸ್ತೆಯಲ್ಲಿ ಹೆಣ ಕಾಣುವ ಸ್ಥಿತಿ ಬರುತ್ತೆ ಎಂದು ಇಬ್ರಾಹಿಂ ಆತಂಕ ವ್ಯಕ್ತಪಡಿಸಿದರು.
ಜನರಿಗೆ ಕೊರೊನಾ ಕುರಿತ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಹಾಗಾದಾಗ ಮಾತ್ರ ಬೆಡ್ ಗಳ ಸಮಸ್ಯೆ ನಿವಾರಣೆ ಆಗುತ್ತೆ. ಸರ್ಕಾರಕ್ಕೆ ಕೊರೊನಾ ನಿಯಂತ್ರಣಕ್ಕಾಗಿ ಸಲಹಗೆಳನ್ನ ನೀಡಿದ್ದೇವೆ. ಸರ್ಕಾರ ಶೀಘ್ರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.