ಬೀದರ್: ಕರ್ನಾಟಕದಲ್ಲಿ ಇಂತಹ ಕೆಟ್ಟ ಸರಕಾರ ನೋಡಿರಲಿಲ್ಲ. ಹಿಂದೆಯೂ ಇಂತಹ ಸರ್ಕಾರ ಬಂದಿರಲಿಲ್ಲ.. ಮುಂದೆಯೂ ಬರುವುದಿಲ್ಲ.. ಕೊರೊನಾದಿಂದ ಜನರನ್ನ ದೇವರೇ ಕಾಪಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಸವ ಕಲ್ಯಾಣದಲ್ಲಿ ಮಾತನಾಡಿದ ಮಾಜಿ ಸಿಎಂ ‘ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಗಮನಿಸಿದೆ. 18ರ ನಂತ್ರ ಸರ್ವಪಕ್ಷ ಸಭೆ ಕರೆದು ಸಲಹೆ ಪಡೆಯುವುದಾಗಿ ಕೇಳ್ತಾರಂತೆ. ಯಾವ ಪುರುಷಾರ್ಥಕ್ಕಾಗಿ ಸಭೆ ಕರೆಯುತ್ತಾರೆ.. ಸಲಹೆ ಪಡೆಯುತ್ತಾರೆ? ಎಂದು ಪ್ರಶ್ನಿಸಿದರು.
ಇನ್ನು ಈಗಾಗಲೇ ಮೊದಲ ಹಂತದಲ್ಲಿ ಅನಾಹುತಗಳಾದಾಗ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಬಾರದೆಂದು ಸಹಕಾರ ನೀಡಿದ್ದೇವು. ಆದ್ರೆ, ಈಗ ಎರಡನೇ ಹಂತದ ಕೊರೊನಾ ಪ್ರಾರಂಭವಾಗಿದೆ. ಹಾಗಂತ, ಇದು ಏಕಾಏಕಿ ಬಂದದ್ದಲ್ಲ. ತಜ್ಞರು ಸರಕಾರಕ್ಕೆ ನಿರಂತರವಾಗಿ ಜನವರಿ ಫೆಬ್ರವರಿಯಲ್ಲಿ2ನೇ ಹಂತದ ಕೊರೊನಾ ವೇಗವಾಗಿ ಹರಡುತ್ತದೆಂದು ವರದಿ ಕೊಟ್ಟಿದ್ದರು ಎಂದರು.
ಸರ್ಕಾರ ಮುಂಜಾನೆಯೊಂದು ಸಂಜೆಯೊಂದು ಮಾರ್ಗ ಸೂಚಿ ಹೊರಡಿಸುತ್ತೆ. ಇನ್ನು ಒಬ್ಬ ಮಂತ್ರಿ ಒಂದು ಹೇಳಿದ್ರೆ, ಇನ್ನೊಬ್ಬ ಮತ್ತೊಂದು ಹೇಳ್ತಾನೆ. ಒಂದು ಲಸಿಕೆ ಕೊಡಬೇಕು ಅಂದ್ರೆ ಮಾರ್ಕೆಟ್ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಿಲ್ಲ.. ಇನ್ನೆರಡು ದಿನ ಮಾತ್ರ ಸಿಗಬಹುದು. ಮುಖ್ಯಮಂತ್ರಿಗಳ ಸಮೇತ ಎಲ್ಲರೂ ಉಪಚಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಜನರ ಜೀವಕ್ಕಿಂತ ಇವರಿಗೆ ಚುನಾವಣೆ ಮುಖ್ಯವಾಗಿದೆ. ಕೊರೊನಾದಿಂದ ಜನರನ್ನ ದೇವರೇ ಕಾಪಾಡಬೇಕು ಎಂದು ಕಿಡಿಕಾರಿದ್ರು.
Laxmi News 24×7