Breaking News

ಬೀದಿಗಿಳಿದ ಸಾರಿಗೆ ಕುಟುಂಬಸ್ಥರು ಬೆಳಗಾವಿಯಲ್ಲಿ ಪ್ರತಿಭಟನೆ

Spread the love

6ನೇ ವೇತನ ಆಯೋಗ ಜಾರಿ ಮಾಡುವಂತೆ ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ.ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸದ ಸರ್ಕಾರದ ನಡೆಗೆ ನೌಕರರ ಕುಟುಂಬಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಕ್ಕಳು, ಮಹಿಳೆಯರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ.

ಮಕ್ಕಳು ಕೈಯಲ್ಲಿ ತಟ್ಟೆ ಹಿಡಿದು ಬಾರಿಸುತ್ತಾ ವಿನೂನತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಆರನೇ ವೇತನ ಅಸಯೋಗ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದ್ದಾರೆ‌.

ಸಾರಿಗೆ ನೌಕರರು ಹೇಳುತ್ತಿರುವುದೇನು..?

ಪ್ರಯಾಣಿಕ ಪ್ರಭುಗಳೆ ನಮ್ಮನ್ನು ಕ್ಷಮಿಸಿ ಕಳೆದ ವರ್ಷ ಅಂದರೆ 11-12-2020 ರಂದು ಸಾರಿಗೆ ನೌಕರರು ಸರ್ಕಾರಿ ನೌಕರರೆಂದು ಘೋಷಿಸುವದರೊಂದಿಗೆ ಸರ್ಕಾರಿ ಸವಲತ್ತುಗಳನ್ನು ನೀಡಬೇಕೆಂದು ನಾವುಗಳು ಮಾಡಿದ ಹೋರಾಟದ ಸಮಯದಲ್ಲಿ ಸರ್ಕಾರವು “ ಸರ್ಕಾರಿ ನೌಕರರೆಂದು ” ಘೋಷಿಸುವ ಒಂದು ಬೇಡಿಕೆಯನ್ನು ಈಡೇರಿಸಿದೆ.ಅದನ್ನು ಹೊರತುಪಡಿಸಿ ಸರ್ಕಾರಿ ನೌಕರರಿಗಿರುವ ಸಮಾನ ಸವಲತ್ತುಗಳನ್ನು ಅಂದರೆ 9 ಬೇಡಿಕೆಗಳನ್ನು 3 ತಿಂಗಳ ಕಾಲಾವಕಾಶದಲ್ಲಿ ಈಡೇರಿಸುವುದಾಗಿ “ ಅಖಿತ ರೂಪದಲ್ಲಿ ಭರವಸೆಯನ್ನು ಸರ್ಕಾರವು ನೀಡಿತ್ತು . ಮಾರ್ಚ್ 15ಕ್ಕೆ ಸರ್ಕಾರ ತೆಗೆದುಕೊಂಡ ಕಾಲಾವಕಾಶ ಮುಗಿದಿದ್ದು , ಇದುವರೆಗೂ ನಮಗೆ ಅತಿ ಮುಖ್ಯವಾದ ಬೇಡಿಕೆ 6 ನೇ ವೇತನ ಆಯೋಗವನ್ನು ಜಾರಿ ಮಾಡುವಲ್ಲಿ ಸರ್ಕಾರವು ವಿಫಲವಾಗಿದೆ . ಆದರಿಂದ ಈ ಮುಷ್ಕರ ನಮಗೆ ಅನಿವಾರ್ಯವಾಗಿರುತ್ತದೆ ಎಂದು ಸಾರಿಗೆ ನೌಕರರು ತಿಳಿಸಿದ್ದಾರೆ. .‌

ಸಾರಿಗೆ ನೌಕರರ ಕುರಿತು ಮಾತನಾಡಿದರು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು, ಪ್ರತಿಭಟನಾನಿರತರು ಪ್ರತಿಭಟನೆ ಕೈ ಬಿಟ್ಟು ಬಸ್‍ಗಳನ್ನು ಓಡಿಸಲು ಆಗಮಿಸಬೇಕು. ಇದೇ ರೀತಿ ಪ್ರತಿಭಟನೆ ಮುಂದುವರಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ