ಬೆಳಗಾವಿ: ಬೆಳಗಾವಿ ಲೋಕಸಭಾ ಚುನಾವಣೆ ಎಲ್ಲರಲ್ಲೂ ಒಂದು ಕುತೂಹಲ ಮೂಡಿಸಿದೆ ದಿವಂಗತ ಸುರೇಶ್ ಅಂಗಡಿಯವರ ನಿಧನದ ನಂತರ ಬೆಳಗಾವಿಯಲ್ಲಿ ಚುನಾವಣೆ ರಂಗ ಜೋರಾಗಿಯೇ ನಡೆದಿದೆ.ಒಂದು ಕಡೆ ಬಿಜೆಪಿ ಪ್ರಚಾರ ಜೋರಾಗಿ ಆದ್ರೆ ಇನ್ನೊಂದು ಕಡೆ ಕಾಂಗ್ರೇಸ್ ಪಕ್ಷದ ಪ್ರಚಾರ ಇನ್ನು ಭರ್ಜರಿಯಾಗಿ ಸಾಗುತ್ತಿದೆ
ಸತೀಶ್ ಜಾರಕಿಹೊಳಿ ಅವರ ಪ್ರಚಾರ ದಿನದಿಂದ ದಿನಕ್ಕೆ ಭರ್ಜರಿಯಾಗಿ ಸಾಗುತ್ತಿದ್ದು ಪ್ರತಿಯೊಂದು ಸಮಾಜದ ಜನ ಸತೀಶ್ ಜಾರಕಿಹೊಳಿ ಅವರ್ ಬೆಂಬಲಕ್ಕೆ ನಿಲ್ಲುತ್ತಿವೆ.

ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ದಿನಾಂಕ ಹತ್ತಿರ ಬಂದಿದ್ದು ಸತೀಶ್ ಜಾರಕಿಹೊಳಿ ಅವರಿಗೆ ಎಲ್ಲೆಡೆಯಿಂದ ಅತ್ತುತಮ ಬೆಂಬಲ ವ್ಯಕ್ತವಾಗುತ್ತಿದೆ ಇನ್ನು ಇವತ್ತು ಮೇದಾರ ಸಮಾಜದ ವತಿಯಿಂದ ಬೆಳಗಾವಿ ಲೋಕಸಭಾ ಉಪಚುನಾವಣೆ ನಿಮಿತ್ತ ಇಂದು ಮೇದಾರ ಸಮಾಜದ ಮುಖಂಡರಿಂದ ಗೋಕಾಕ್,ಬೈಲಹೊಂಗಲ,ಬೆಳಗಾವಿ ದಕ್ಷಿಣ,ಹಾಗೂ ಬೆಳಗಾವಿ ಉತ್ತರ ಕ್ಷೇತ್ರಗಳಿಗೆ ಭೇಟಿ ನೀಡಿ ಕಾಂಗ್ರೇಸ್ ಅಭ್ಯರ್ಥಿ ಶ್ರೀ ಸತೀಶ ಜಾರಕಿಹೊಳಿ ಪರ ಮತಯಾಚಿಸಲಾಯಿತು.ಈ ಸಂದರ್ಭದಲ್ಲಿ ರಾಜು ಮೇದಾರ,ಬಸವರಾಜ ಮೇದಾರ,ಲಕ್ಷ್ಮಣ ಬುರುಡ,ರಾಜು ನೇಸರಿಕರ ಸೇರಿದಂತೆ ಇತರರು ಉಪಸ್ಥಿತರಿದ್ದರು
Laxmi News 24×7