ಬೆಳಗಾವಿ: ಇದು ಪ್ರಜಾಪ್ರಭುತ್ವ, ರೈತ ಮುಖಂಡ ಇರಬಹುದು,ಕಾರ್ಮಿಕ ಮುಖಂಡ ಇರಬಹುದು, ರಾಜಕೀಯದವರು ನಾವೂ ಸಹ ಸರ್ಕಾರ ವಿರುದ್ಧವೇ ಪ್ರತಿಭಟನೆ ಮಾಡೋದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ಸಿಬ್ಬಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅವರು ಮಾಡಿದ ತಪ್ಪು ಹೇಳುವುದು ನಮ್ಮ ಕೆಲಸ, ಅವರನ್ನು ಹೊಗಳಕ್ಕಾಗುತ್ತಾ(?) ಸಾರಿಗೆ ಸಿಬ್ಬಂದಿ ಹಕ್ಕು ಮೊಟಕು ಮಾಡುತ್ತಿರುವುದು ಸರಿಯಲ್ಲ, ಕೋಡಿಹಳ್ಳಿ, ಸಾರಿಗೆ ಸಿಬ್ಬಂದಿ ವಶಕ್ಕೆ ಪಡೆದಿದ್ದನ್ನು ಖಂಡಿಸುತ್ತೇನೆ ಎಂದರು.
ಇನ್ನು ಪ್ರಜಾಪ್ರಭುತ್ವದಲ್ಲಿ ಇರೋ ಹಕ್ಕು ಮೊಟಕುಗೊಳಿಸೋದು ಸರಿ ಇಲ್ಲ, ಸರ್ಕಾರವೇ ಅವರ ಬಳಿ ಹೋಗಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲಿ. ಹೀಗೆ ಅರೆಸ್ಟ್ ಮಾಡೋದು ಸರಿಯಲ್ಲ, ಡೀಲಿಂಗ್ ನಡೆಸುತ್ತಿದ್ದಾರಲ್ಲ ಆ ರೀತಿ ತಿಳಿದುಕೊಂಡಿದ್ದಾರೆ. ಇದು ಬಹಳ ದಿನ ಉಳಿಯುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
Laxmi News 24×7