Breaking News

ಬೈಎಲೆಕ್ಷನ್‍ನಲ್ಲಿ ರೈತಪರ, ಕನ್ನಡಪರ, ಕಮ್ಯುನಿಷ್ಟ ಪಕ್ಷಗಳಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನವಿ

Spread the love

ಬೈಎಲೆಕ್ಷನ್‍ನಲ್ಲಿ ರೈತಪರ, ಕನ್ನಡಪರ, ಕಮ್ಯುನಿಷ್ಟ ಪಕ್ಷಗಳಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನವಿ

ವಿವಿಧ ರೈತ ಸಂಘಗಳು, ಕನ್ನಡಪರ ಸಂಘಟನೆಗಳು, ಕಮ್ಯುನಿಷ್ಟ ಪಕ್ಷಗಳ ಮುಖಂಡರು ಉಪಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಬೆಳಗಾವಿ ಲೋಕಸಭೆ ಉಪಚುನಾವಣೆ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರವಾಗಿ ಪ್ರಚಾರ ಸಂಬಂಧ ಬೆಳಗಾವಿಗೆ ಆಗಮಿಸಿದ್ದ ವೇಳೆ ಬುಧವಾರ ಸಂಜೆ ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್, ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರ ಶಾಂತ್‍ಕುಮಾರ್ ಸೇರಿದಂತೆ ಅನೇಕ ಮುಖಂಡರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಬೆಂಬಲಿಸಬೇಕು ಎಂದು ಕೇಳಿಕೊಂಡರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತರು, ಕಾರ್ಮಿಕ ವಿರೋಧಿ ನೀತಿ ವಿರುದ್ಧ ಸಾಕಷ್ಟು ಹೋರಾಟ ಮಾಡಿದ್ದಿರಿ. ಹೀಗಾಗಿ ಈಗ ಸಮಯ ಬಂದಿದ್ದು, ನಮ್ಮ ಅಭ್ಯರ್ಥಿಗೆ ಬೆಂಬಲಿಸಬೇಕು ರೈತಪರ, ಕನ್ನಡಪರ ಸೇರಿದಂತೆ ಕಮ್ಯುನಿಷ್ಟ ಪಕ್ಷಗಳ ಮುಖಂಡರಿಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡರು


Spread the love

About Laxminews 24x7

Check Also

ತವಂದಿ ಘಾಟನಲ್ಲಿ ಕಂದಕಕ್ಕೆ ಬಿದ್ದ ಕಂಟೇನರ್ ವಾಹನ

Spread the love ನಿಪ್ಪಾಣಿಯ ತವಂದಿ ಘಾಟನಲ್ಲಿ ಕಂದಕಕ್ಕೆ ಬಿದ್ದ ಕಂಟೇನರ್ ವಾಹನ ಚಿಕ್ಕೋಡಿ:ನಿಪ್ಪಾಣಿ ತಾಲೂಕಿನ ತವಂದಿ ಘಾಟ್‌ನಲ್ಲಿ ಕಂಟೇನರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ