ಬೆಂಗಳೂರು: ಇಂದಿನಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರ ಆರಂಭಿಸುತ್ತಿದ್ದು, ಬಸ್‍ಗಳು ರಸ್ತೆಗಿಳಿಯಲ್ಲ.
ಇಂದಿನಿಂದ ಅನಿರ್ದಿಷ್ಟಾವಧಿಗೆ ಬಸ್ ಮುಷ್ಕರ ನಡೆಯುತ್ತಿದ್ದು, ಮನೆಯಿಂದ ಹೊರಡುವ ಮುನ್ನ ಎಚ್ಚರವಾಗಿರಿ. ಬಸ್ ಸಿಗಲ್ಲ, ಬಸ್ ಸಿಗದೇ ಪರದಾಡಬೇಡಿ. ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲೂ ಸರ್ಕಾರಿ ಬಸ್‍ಗಳ ಓಡಾಟ ಇಲ್ಲ. ಇಂದು ಸುಮಾರು 24,400 ಸರ್ಕಾರಿ ಬಸ್‍ಗಳು ರಸ್ತೆಗೆ ಇಳಿಯಲ್ಲ.
ಡಿಸೆಂಬರ್‍ನಲ್ಲಿ 4 ದಿನ ಸಾರಿಗೆ ನೌಕರರ ಮುಷ್ಕರ ನಡೆದಿತ್ತು. ಇದೀಗ ಮತ್ತೆ ಇಂದಿನಿಂದ ಅನಿರ್ದಿಷ್ಟಾವಧಿಗೆ ಬಸ್ ಮುಷ್ಕರ ನಡೆಯಲಿದೆ. ಹೀಗಾಗಿ ಮನೆಯಿಂದ ಹೊರಡುವ ಮುನ್ನ ಎಚ್ಚರವಾಗಿರಿ. ಅಲ್ಲದೆ ಹೀಗಾಗಿ ದೂರದ ಊರಿಗೆ ಪ್ರಯಾಣಿಸುವ ಮೊದಲು ಯೋಚಿಸಿ.
ಎಷ್ಟು ಬಸ್ ರಸ್ತೆಗೆ ಇಳಿಯಲ್ಲ..?
ಬಿಎಂಟಿಸಿ – 6536, ಕೆಎಸ್‌ಆರ್‌ಟಿಸಿ – 8360, ವಾಯುವ್ಯ ಸಾರಿಗೆ – 4868 , ಈಶಾನ್ಯ ಸಾರಿಗೆ – 4600 ಒಟ್ಟು 24,400 ಬಸ್ ರಸ್ತೆಗೆ ಇಳಿಯಲ್ಲ.