Breaking News

ದರ್ಶನ್‌-ಸುದೀಪ್‌ ಒಂದಾಗಬೇಕು: ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಅಭಿಯಾನ

Spread the love

ನಟ ದರ್ಶನ್‌ ಹಾಗೂ ಸುದೀಪ್‌ ಒಂದು ಸಮಯದಲ್ಲಿ ಕುಚುಕು ಗೆಳೆಯರಾಗಿದಿದ್ದು ನಿಮಗೆ ಗೊತ್ತೇ ಇದೆ. ಆ ನಂತರ ಇಬ್ಬರ ನಡುವೆ ಮುನಿಸು ಬಂದು ಈಗ ದೂರವಾಗಿದ್ದಾರೆ. ಆದರೆ, ಈಗ ಅವರ ಅಭಿಮಾನಿಗಳು ಅವರಿಬ್ಬರು ಮತ್ತೆ ಒಂದಾಗ ಬೇಕೆಂದು ಬಯಸಿದ್ದಾರೆ. ಇದರ ಪರಿಣಾಮವಾಗಿ ಅಭಿಮಾನಿಗಳು ಟ್ವೀಟರ್‌ನಲ್ಲಿ ಒಂದು ಅಭಿಯಾನ ವನ್ನೇ ಆರಂಭಿಸಿದ್ದಾರೆ.

#DbossKicchaComeTogether ಅಭಿಯಾನದಡಿ ಅವರ ಅಭಿಮಾನಿಗಳು ಟ್ವೀಟ್‌ ಮಾಡಿದ್ದಾರೆ. ಜೊತೆಗೆ ದರ್ಶನ್‌ ಸುದೀಪ್‌ ಜೊತೆಗಿರುವ ಸಿಡಿಪಿಯೊಂದನ್ನು ಕೂಡಾ ಬಿಡುಗಡೆ ಮಾಡಿದ್ದಾರೆ. ಈ ಇಬ್ಬರು ಒಟ್ಟಾಗುವು ದರಿಂದ ವೈಯಕ್ತಿಕವಲ್ಲದೇ ಕನ್ನಡ ಚಿತ್ರರಂಗಕ್ಕೆ ಇದರಿಂದ ಲಾಭವಿದೆ ಎಂದು ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಈ ಅಭಿಯಾನ ದೊಡ್ಡ ಮಟ್ಟ ತಲುಪುವ ಸಾಧ್ಯತೆ ಇದೆ. ದರ್ಶನ್‌ ಹಾಗೂ ಸುದೀಪ್‌ ಬೇರೆ ಬೇರೆಯಾಗಿ ನಾಲ್ಕು ವರ್ಷಗಳಾಗಿವೆ. ಅವತ್ತಿನಿಂದಲೂ ಅವರ ಅಭಿಮಾನಿಗಳು ಈ ಇಬ್ಬರು ಮತ್ತೆ ಒಂದಾಗಬೇಕು ಎಂದು ಆಸೆ ಪಡುತ್ತಲೇ ಬಂದಿದ್ದಾರೆ.


Spread the love

About Laxminews 24x7

Check Also

ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ

Spread the love ಬೆಳಗಾವಿಯಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿ ಹಾಗೂ ಉಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ