ನವದೆಹಲಿ,ಮಾ.24-ಇನ್ನು ಮುಂದೆ ದೆಹಲಿ ನಿವಾಸಿಗಳು ಹೋಟೆಲ್ ಮತ್ತು ಕ್ಲಬ್‍ಗಳಲ್ಲಿ ಫುಲ್ ಬಾಟಲ್ ಮದ್ಯ ಆರ್ಡರ್ ಮಾಡಬಹುದು. ಅಬಕಾರಿ ನೀತಿಯಲ್ಲಿ ಸುಧಾರಣೆ ತರಲು ಮುಂದಾಗಿರುವ ದೆಹಲಿ ಸರ್ಕಾರ ಫುಲ್ ಬಾಟಲ್ ಆರ್ಡರ್‍ಗೆ ಸಮ್ಮತಿ ನೀಡಲು ಮುಂದಾಗಿದೆ.
ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ನೇತೃತ್ವದ ಸಚಿವರ ನಿಯೋಗ ಅಬಕಾರಿ ನೀತಿ ಸುಧಾರಣೆ ಉದ್ದೇಶದಿಂದ ಫುಲ್ ಬಾಟಲ್ ಮದ್ಯ ಆರ್ಡರ್‍ಗೆ ಅವಕಾಶ ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಇದುವರೆಗೂ ದೆಹಲಿಯ ಕ್ಲಬ್ ಮತ್ತು ಹೋಟೆಲ್‍ಗಳಲ್ಲಿ ಪೆಗ್ ಲೆಕ್ಕದಲ್ಲಿ ಮದ್ಯ ಸರಬರಾಜು ಮಾಡಲಾಗುತ್ತಿತ್ತು.ಇನ್ನು ಮುಂದೆ ದೆಹಲಿಗರು ಪೆಗ್ ಲೆಕ್ಕ ಬಿಟ್ಟು ಫುಲ್ ಬಾಟಲ್ ಆರ್ಡರ್ ಮಾಡಿ ಹೊಟ್ಟೆ ತುಂಬ ಕುಡಿದು ಟೈಟ್ ಆಗಬಹುದಾಗಿದೆ. ಫುಲ್ ಬಾಟಲ್ ಖರೀದಿಸುವ ಮದ್ಯಪ್ರಿಯರು ಸ್ಥಳದಲ್ಲೇ ಎಣ್ಣೆ ಖಾಲಿ ಮಾಡಿದ ಮೇಲೆ ಜÁಗ ಖಾಲಿ ಮಾಡಬೇಕು ಎಂಬ ನಿಯಮ ಮೀರುವಂತಿಲ್ಲ.
Laxmi News 24×7