Breaking News

ಕಣ್ಣು ಕಾಣದ ವ್ಯಕ್ತಿಯ ಪಾತ್ರದ ಮೂಲಕ ಮನರಂಜಿಸುವ ಪ್ರಯತ್ನ: ‘ಗೋಲ್ಡನ್​ ಸ್ಟಾರ್​’ ಗಣೇಶ್​

Spread the love

ಚೆಲ್ಲಾಟ’ ಸಿನಿಮಾದಿಂದ ನಾಯಕನಾದ ‘ಗೋಲ್ಡನ್​ ಸ್ಟಾರ್​’ ಗಣೇಶ್​ ಅವರು ಈವರೆಗೂ ಹಲವಾರು ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅನೇಕ ಏಳು-ಬೀಳುಗಳನ್ನು ಅವರು ಕಂಡಿದ್ದಾರೆ. ನಾನಾ ವೇಷದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈಗ ಮತ್ತೊಂದು ಗೆಟಪ್​ನಲ್ಲಿ ಜನರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ವಿಶೇಷ ಏನೆಂದರೆ, ಈ ಬಾರಿ ಕಣ್ಣು ಕಾಣದ ವ್ಯಕ್ತಿಯ ಪಾತ್ರದ ಮೂಲಕ ಮನರಂಜಿಸುವ ಪ್ರಯತ್ನ ಅವರದ್ದು.

ಸಿಂಪಲ್​ ಸುನಿ ಮತ್ತು ಗಣೇಶ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ‘ಸಖತ್​’ ಈಗಾಗಲೇ ಒಂದು ಪೋಸ್ಟರ್​ ಬಿಡುಗಡೆ ಮಾಡಿತ್ತು. ಅದರಲ್ಲಿ ಗಾಯಕನ ಗೆಟಪ್​ನಿಂದ ಗಣೇಶ್​ ಗಮನ ಸೆಳೆದಿದ್ದರು. ಆದರೆ ಈಗ ಹೊರಬಂದಿರುವ ಹೊಸ ಫೋಟೋಗಳಲ್ಲಿ ಗಣೇಶ್​ ಅಂಧನಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಲವರ್ ಬಾಯ್​ ಆಗಿ, ಸದಾ ಸ್ಟೈಲಿಶ್​ ಲುಕ್​ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಗಣೇಶ್​ ಅವರಿಗೆ ಈ ಸಿನಿಮಾದಲ್ಲಿ ನಿರ್ದೇಶಕ ಸುನಿ ಸಂಪೂರ್ಣ ಡಿಫರೆಂಟ್​ ಪಾತ್ರ ನೀಡಿದಂತಿದೆ.

ಇಂಥ ಪಾತ್ರ ಮಾಡುತ್ತಿರುವುದಕ್ಕೆ ಸ್ವತಃ ಗಣೇಶ್​ ತುಂಬ ಎಗ್ಸೈಟ್​ ಆಗಿದ್ದಾರೆ. ಆ ಬಗ್ಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ‘ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ. ಮೊದಲ ಬಾರಿಗೆ ನನ್ನ ನೋಟವನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಗಳಿಗೆ, ಬಿಚ್ಚಿಟ್ಟ ಪ್ರೀತಿಯ ಬೆಳಕು ಚೆಲ್ಲಿ ಹಾರೈಸಿ’ ಎಂದು ಗಣೇಶ್​ ಟ್ವೀಟ್​ ಮಾಡಿದ್ದಾರೆ.

ಈ ಫೋಟೋಗಳನ್ನು ನೋಡಿದ ಬಳಿಕ ಗಣೇಶ್​ ಅಭಿಮಾನಿಗಳು ‘ಸಖತ್​’ ಸಿನಿಮಾ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆ ಡಬಲ್​ ಆಗಿದೆ. ಈ ಚಿತ್ರಕ್ಕೆ ಮಾ.22ರಿಂದ ಶೂಟಿಂಗ್​ ಆರಂಭ ಆಗಿದೆ. ಗಣೇಶ್​ಗೆ ಜೋಡಿಯಾಗಿ ನಟಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಹಾಸ್ಯ ನಟ ಧರ್ಮಣ್ಣ ಕಾಣಿಸಿಕೊಳ್ಳಲಿದ್ದಾರೆ. ಅವರ ಫಸ್ಟ್​ಲುಕ್​ ಪೋಸ್ಟರ್​ ಕೂಡ ಈಗಾಗಲೇ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.


Spread the love

About Laxminews 24x7

Check Also

ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ

Spread the love ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ