Breaking News

ಜೊತೆ ಜೊತೆಯಲಿ ಡೈರೆಕ್ಟರ್ ಆರೂರು ಜಗದೀಶ್ ಸೀರಿಯಲ್ ನಲ್ಲಿ ಹಿರಿಯ ನಟಿ ಉಮಾಶ್ರೀ..? ಕಿರುತೆರೆಗೆ ಬಂದರು ಪುಟ್ಮಲ್ಲಿ..?

Spread the love

ಕನ್ನಡ ಸೀರಿಯಲ್ ಲೋಕದಲ್ಲಿ ಇವರದ್ದು ದೊಡ್ಡ ಹೆಸರು.ಇವರು ನಿರ್ದೇಶನ ಮಾಡಿರುವ ಎಲ್ಲಾ ಸೀರಿಯಲ್ಸ್ ಸಾವಿರಾರು ಎಪಿಸೋಡ್ಸ್ ಪ್ರದರ್ಶನ ಕಂಡಿವೆ. ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿವೆ. ಇಂದಿಗೂ ಮೆಚ್ಚುಗೆಯಾಗ್ತಿವೆ. ಅದಕ್ಕೆ ಬೆಸ್ಟ್ ಎಕ್ಸಂಪಲ್ ಜೊತೆ ಜೊತೆಯಲಿ ಸೀರಿಯಲ್.. ಸೀರಿಯಲ್ ಜಗತ್ತಿನಲ್ಲಿ ಹೊಸ ದಾಖಲೆ ಬರೆದ ಧಾರಾವಾಹಿ ಜೊತೆ ಜೊತೆಯಲಿ.. ಒಂದು ನಾವಿರಾದ ಪ್ರೇಮ ಕಥೆ.. ಫ್ಯಾಮಿಲಿ ಟಚ್ ಎಲ್ಲವೂ ಇರುವ ಈ ಸೀರಿಯಲ್ ಇಂದು ಕರುನಾಡಿನ ಮನೆ ಮಂದಿ ಮೆಚ್ಚಿದ್ದಾರೆ. ಈ ಸೀರಿಯಲ್ ಸೂತ್ರಧಾರಿ ನಿರ್ದೇಶಕ ಆರೂರ್ ಜಗದೀಶ್. ಅನಿರುದ್ಧ ಹಾಗೂ ಮೇಘಾ ಶೆಟ್ಟಿ ನಟಿಸ್ತಿರುವ ಜೊತೆ ಜೊತೆಯಲಿ ಸೀರಿಯಲ್ ನ ನಿರ್ದೇಶಕ ಆರೂರ್ ಜಗದೀಶ್.

ಆರೂರ್ ಜಗದೀಶ್ ಅವರಿಗೆ ಕನ್ನಡ ಕಿರುತೆರೆ ಲೋಕದಲ್ಲಿ ಒಂದೊಳ್ಳೆ ಬ್ರ್ಯಾಂಡ್ ಇದೆ. ಅವರು ಯಾವುದೇ ಸೀರಿಯಲ್ ಮಾಡಲಿ ಅದು ಸಕ್ಸಸ್ ಅಂತಾನೇ.. ಅದಕ್ಕೆ ಈ ಹಿಂದೆ ಜನ ಮೆಚ್ಚುಗೆ ಪಡೆದ ಅಶ್ವಿನಿ ನಕ್ಷತ್ರ ಸೀರಿಯಲ್.. ಜಯರಾಮ್ ಕಾರ್ತಿಕ್ ಹಾಗೂ ಮಯೂರಿ ನಟನೆಯ ಈ ಧಾರಾವಾಹಿ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು.

ಈ ಸೀರಿಯಲ್ ಮಾತ್ರವಲ್ಲ ಆರೂರು ಜಗದೀಶ್ ನಿರ್ದೇಶನದ ಗುಪ್ತಗಾಮಿನಿ, ಜೋಡಿಹಕ್ಕಿ, ಶುಭವಿವಾಹ, ಅರುಂಧತಿ ಹೀಗೆ ಸಾಕಷ್ಟು ಪಾಫ್ಯುಲರ್ ಧಾರಾವಾಹಿಗಳನ್ನು ಕೊಟ್ಟ ನಿರ್ದೇಶಕ ಕಂ ನಿರ್ಮಾಪಕ ಆರೂರು ಜಗದೀಶ್ ಇದೀಗ ಮತ್ತೊಂದು ಹೊಸ ಸೀರಿಯಲ್ ಮಾಡೋದಿಕ್ಕೆ ರೆಡಿಯಾಗಿದ್ದಾರೆ.

ಕಿರುತೆರೆಗೆ ಬಂದ ಹಿರಿಯ ನಟಿ ಉಮಾಶ್ರೀ.

ಕನ್ನಡ ಸಿನಿಮಾ ಇಂಡಸ್ಟ್ರೀಯ ಖ್ಯಾತ ಕಲಾವಿದೆ. ಹಿರಿಯ ನಟಿ ಪುಟ್ಮಲ್ಲಿ ಖ್ಯಾತಿಯ ಉಮಾಶ್ರೀ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ. ಅದು ಆರೂರ್ ಜಗದೀಶ್ ನಿರ್ದೇಶನದ, ನಿರ್ಮಾಣ ಮಾಡುವ ಸೀರಿಯಲ್ ನಲ್ಲಿ ಉಮಾಶ್ರೀ ಬಣ್ಣ ಹಚ್ಚಲಿದ್ದಾರೆ. ಒಬ್ಬೊಂಟಿ ತಾಯಿ ಮೂರು ಜನ ಹೆಣ್ಣು ಮಕ್ಕಳು ಹೇಗೆ ಸಾಕುತ್ತಾಳೆ..? ಹೇಗೆ ಬೆಳೆಸುತ್ತಾರೆ..? ಹೆಣ್ಣು ಮಕ್ಕಳು ಗಂಡು ಮಕ್ಕಳಂತೆ ಬೆಳೆದು ಹೇಗೆ ಪ್ರಪಂಚವನ್ನು ಎದುರಿಸ್ತಾರೆ..? ಅನ್ನೋದು ಸೀರಿಯಲ್ ನ ಕನ್ಸೆಪ್ಟ್. ಇಲ್ಲಿ ಉಮಾಶ್ರೀ ಮೇನ್ ಲೀಡ್ ಪ್ಲೇ ಮಾಡಲಿದ್ದಾರೆ. ಉಳಿದಂತೆ ಹೊಸಬರು ಹಾಗೂ ಹಳೆ ತಂಡದವರು ಇಲ್ಲಿ ಕೆಲಸ ಮಾಡಲಿದ್ದಾರೆ. ಇದೊಂದು ಪ್ರಯೋಗಿಕ ಸೀರಿಯಲ್ ಎನ್ನುತ್ತಾರೆ ನಿರ್ದೇಶಕ ಆರೂರು ಜಗದೀಶ್.. ನಾಳೆ ಈ ಸೀರಿಯಲ್ ಮುಹೂರ್ತ ನೆರವೇರಲಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ