Breaking News

ದೆಹಲಿ-ಲಖನೌ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ

Spread the love

ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್‌ನ ಲಗ್ಗೇಜ್ ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶತಾಬ್ದಿ ಎಕ್ಸ್‌ಪ್ರೆಸ್‌ ಶನಿವಾರ ಬೆಳಗ್ಗೆ 6.41ರ ಹೊತ್ತಿಗೆ ಗಾಜಿಯಾಬಾದ್ ನಿಲ್ದಾಣಕ್ಕೆ ತಲುಪಿತ್ತು. ಬೆಂಕಿ ಅವಘಡದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ನವದೆಹಲಿ – ಲಖನೌ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಬೆಂಕಿ ಅಕಸ್ಮಿಕ ಅವಘಡ ಸಂಭವಿಸಿದ್ದು, ಸದ್ಯ ರೈಲಿನಲಿರುವ ಪ್ರಯಾಣಿಕರು ಸೇಫ್​ ಆಗಿದ್ದಾರೆ. ಯಾರೊಬ್ಬರಿಗೂ ಸಹ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love

About Laxminews 24x7

Check Also

ಕಾರದಗಾ ಗ್ರಾಮದ ಅಭಿವೃದ್ಧಿಯೇ ನನ್ನ ಧ್ಯೇಯ

Spread the loveಕಾರದಗಾ ಗ್ರಾಮದಲ್ಲಿ 1 ಕೋಟಿ 08 ಲಕ್ಷ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಲಾಯಿತು.ಇದಕ್ಕೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ