Breaking News

ಗುಜರಾತ್‌ನಲ್ಲಿ ಮತ್ತೆ ಲಾಕ್‍ಡೌನ್‍ ಘೋಷಣೆ..!?

Spread the love

ಅಹಮದಾಬಾದ್, ಮಾ.19-ಕೊರೊನಾ ಮಹಾಮಾರಿ ತೀವ್ರಗತಿಯಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನೈಟ್‍ಕಫ್ರ್ಯೂ ಜಾರಿಗೊಳಿಸಿದ್ದರೂ ಮತ್ತಷ್ಟು ತುರ್ತುಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗುಜರಾತ್ ಸರ್ಕಾರ ಸಾರ್ವಜನಿಕ ಬಸ್ ಸಂಚಾರ, ಶಾಲಾ-ಕಾಲೇಜುಗಳು, ಉದ್ಯಾನವನ ಹಾಗೂ ಜಿಮ್‍ಗಳನ್ನು ಬಂದ್ ಮಾಡಲು ಆದೇಶಿಸಿದೆ.ಅಹಮದಾಬಾದ್ ಮತ್ತು ಸೂರತ್‍ನಲ್ಲಿ ರಾತ್ರಿ ಕಫ್ರ್ಯೂ 9 ಗಂಟೆಯಿಂದ ಬೆಳಗ್ಗೆ 6ರ ವರೆಗೆ ಇರಲಿದ್ದು, ಎಲ್ಲ ರೀತಿಯ ವಾಹನ ಸಂಚಾರ ಹಾಗೂ ಜನರ ಓಡಾಟವನ್ನು ನಿಷೇಧಿಸಲಾಗಿದೆ. ಮುಂದಿನ ಏಪ್ರಿಲ್ 10ರ ವರೆಗೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ಶಿಕ್ಷಣ ಸಚಿವ ಉಪೇಂದರ್‍ಸಿಂಗ್ ಚೌದ್ರಸೇಮ್ ತಿಳಿಸಿದ್ದಾರೆ.ಸಿಎಂ ವಿಜಯ್ ರೂಪ್ನಿ ಈಗಾಗಲೇ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಮತ್ತಷ್ಟು ತುರ್ತು ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಚರ್ಚೆ ನಡೆಸಿದ್ದಾರೆ. ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲು ನಿರ್ಧರಿಸಲಾಗುತ್ತಿದ್ದು, ಕೊರೊನಾ ನಿರೋಧಕ ಲಸಿಕೆ ನೀಡಿಕೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

ವಿಶ್ವವಿದ್ಯಾನಿಲಯಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಇಂದಿನಿಂದ ಏಪ್ರಿಲ್ 10ರ ವರೆಗೆ ನಡೆಯಬೇಕಾಗಿದ್ದ ಹಲವು ಪರೀಕ್ಷೆಗಳನ್ನು ರದ್ದುಪಡಿಸಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಪ್ರಕಟಣೆ ಹೊರಡಿಸಲಾಗಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ