ನವದೆಹಲಿ : ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಕ್ಕಿದ್ದು, ನಿವೃತ್ತಿಯ ನಂತರ ಎಲ್ಲಾ ಪಿಂಚಣಿ ಸೌಲಭ್ಯಗಳನ್ನ ವಿಳಂಬ ಮಾಡದೆ ಸಕಾಲದಲ್ಲಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹೌದು, ನಿವೃತ್ತಿಯ ದಿನವೇ ಪಿಂಚಣಿ ಸೌಲಭ್ಯ ನೀಡುವಂತೆ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ಸಚಿವಾಲಯದ ಡಿಪಾರ್ಟ್ಮೆಂಟ್ ಆಫ್ ಪೆನ್ಶನ್ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಎಲ್ಲ ಸಚಿವಾಲಯಗಳಿಗೆ ಪತ್ರ ಬರೆದಿದೆ. ಅಂದ್ಹಾಗೆ, ಈ ಮಾಹಿತಿಯನ್ನ ಅಧಿಕೃತ ಮೂಲಗಳೇ ನೀಡಿವೆ.
ಹಲವು ತಿಂಗಳು ಕಳೆದರೂ ನಿವೃತ್ತಿ ವೇತನ ಪಾವತಿಯಾಗದ ಬಗ್ಗೆ ಇಲಾಖೆಗೆ ದೂರುಗಳು ಬಂದಿವೆ. ನಿವೃತ್ತಿಯ ಬಾಕಿಗಳನ್ನ ಇತ್ಯರ್ಥ ಪಡಿಸುವಲ್ಲಿಯೂ ವಿಳಂಬವಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ವಿಳಂಬದ ಅವಧಿಯಲ್ಲಿ ಬಡ್ಡಿ ಪಾವತಿಸುವಂತೆ ಆದೇಶ ನೀಡಿದ್ದಲ್ಲದೆ, ಇಲಾಖೆಯ ಅಧಿಕಾರಿಗಳ ವಿರುದ್ಧವೂ ಟೀಕೆಗಳನ್ನ ಮಾಡಿದ್ದಾರೆ. ಹಾಗಾಗಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗ್ತಿದೆ.
ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಸೂಚನೆಗಳು..!
ನಿವೃತ್ತಿ ಸೌಲಭ್ಯ ನೀಡುವಲ್ಲಿ ವಿಳಂಬದ ಹಿನ್ನೆಲೆಯಲ್ಲಿ ಸರಕಾರ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಪಿಂಚಣಿ ಕುರಿತು ನಿಗಾ ವಹಿಸುವಂತೆ ಸೂಚಿಸಿದೆ. ಕೇಂದ್ರ ಸಚಿವಾಲಯ ನೌಕಕರ ಪಿಂಚಣಿ ಪ್ರಕಗತಿಯನ್ನ ಮೇಲ್ವಿಚಾರಣೆ ಮಾಡಲು ನಿರ್ಧರಿಸಿದೆ.
ಇಲಾಖೆಯಲ್ಲಿ ಪರಿಣಾಮಕಾರಿ ಮೇಲ್ವಿಚಾರಣೆ ವ್ಯವಸ್ಥೆ ಮಾಡಲಾಗುವುದು. ಇದು ಭವಿಷ್ಯದ ಸಾಫ್ಟ್ ವೇರ್ʼನಿಂದ ಲಭ್ಯವಿರುವ ಮಾಹಿತಿಯನ್ನ ಬಳಸುತ್ತೆ. ನೌಕರರ ನಿವೃತ್ತಿಯ ಸಂದರ್ಭದಲ್ಲಿ ಕಚೇರಿಗಳಲ್ಲಿ ಬೀಳ್ಕೊಡುಗೆ ಕಾರ್ಯಕ್ರಮಗಳನ್ನ ಆಗಾಗ್ಗೆ ಆಯೋಜಿಸಲಾಗುತ್ತೆ. ಇದು ಅತ್ಯಂತ ಸೂಕ್ತ ಸಮಯವಾಗಿದ್ದು, ಪ್ರತಿ ಬೀಳ್ಕೊಡುಗೆ ಸಮಾರಂಭದಲ್ಲಿ ಆ ಸಂಸ್ಥೆಯ ಮುಖ್ಯಸ್ಥರು ಮುಂದಿನ ಆರು ತಿಂಗಳಲ್ಲಿ ನಿವೃತ್ತರಾಗಬೇಕಾದ ಇಲಾಖೆಯ ಎಲ್ಲ ನೌಕರರ ಪಿಂಚಣಿ ಪ್ರಕರಣಗಳ ಪ್ರಗತಿಯನ್ನ ಪರಿಶೀಲಿಸಬಹುದು ಎಂದಿದೆ.
 Laxmi News 24×7
Laxmi News 24×7
				 
		 
						
					 
						
					