ಬೆಂಗಳೂರು: ರಾಜ್ಯದಲ್ಲಿ 2023ಕ್ಕೆ ಮತ್ತೊಮ್ಮೆ ಹೆಚ್.ಡಿ.ಕುಮಾರಸ್ವಾಮಿ ನೇತೃತದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ(HD Revanna), ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತದೆಯೋ, ಮೈತ್ರಿ ಸರ್ಕಾರ ಬರುತ್ತದೆಯೋ ಹೇಳುವುದಿಲ್ಲ. ಆದರೆ, ಅಧಿಕಾರಕ್ಕೆ ಬರುವುದು ಪಕ್ಕಾ. ಕುಮಾರಸ್ವಾಮಿ ಹತ್ತಿರ ಕೆಲವು ಗ್ರಹಗಳು ಇದ್ದವು. ಅವು ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹತ್ತಿರ ಸೇರಿವೆ. ಕುಮಾರಸ್ವಾಮಿ ಕೆಲ ದಿನಗಳ ಕಾಲ ನೋವು ಅನುಭವಿಸಿದರು. ಆ ಗ್ರಹದ ಪರಿಣಾಮ ಶಿವಕುಮಾರ್ ಅನುಭವಿಸುವುದು ಬೇಡ ಎಂಬುದು ನಮ್ಮ ಕಳಕಳಿ ಎಂದರು.