Breaking News

ಬೆಂಗಳೂರಿನಿಂದ ಹೊರಟ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು

Spread the love

ಬೆಂಗಳೂರು, ಮಾರ್ಚ್ 14; ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ ಬೆಂಗಳೂರು ನಗರದಿಂದ ಸಂಚಾರ ಆರಂಭಿಸಿದೆ. ಐಆರ್‌ಸಿಟಿಸಿ ರೈಲು ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿದ್ದು, ಮೊದಲ ಬಾರಿಗೆ ಸಂಚಾರವನ್ನು ಪ್ರಾರಂಭಿಸಲಾಗಿದೆ.

ಭಾನುವಾರ ಯಶವಂತಪುರ ರೈಲು ನಿಲ್ದಾಣದಿಂದ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಆರಂಭವಾಯಿತು. ‘ಪ್ರೈಡ್ ಆಫ್ ಕರ್ನಾಟಕ’ ಪ್ಯಾಕೇಜ್ ಪ್ರವಾಸಕ್ಕೆ ಇಂದು ಚಾಲನೆ ನೀಡಲಾಗಿದೆ.

 

ರೈಲು ನಿಲ್ದಾಣದಲ್ಲಿ ಗೋಲ್ಡನ್ ಚಾರಿಯಟ್ ರೈಲು ಸಿಬ್ಬಂದಿಗಳು ಪ್ರವಾಸಿಗರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬೇಸಿಗೆ ರಜೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಐಷಾರಾಮಿ ರೈಲು ಸಂಚಾರವನ್ನು ಆರಂಭಿಸಲಾಗಿದೆ.

 

2008ರಲ್ಲಿ ಮೊದಲು ಗೋಲ್ಡನ್ ಚಾರಿಯಟ್ ಸಂಚಾರ ಆರಂಭಿಸಲಾಗಿತ್ತು. ಆಗ ಕೆಎಸ್‌ಟಿಡಿಸಿ ರೈಲಿನ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಆದರೆ, ನಷ್ಟದ ಕಾರಣ ರೈಲು ಸಂಚಾರ ರದ್ದಾಗಿತ್ತು. 2020ರಲ್ಲಿ ಐಆರ್‌ಸಿಟಿಸಿ ರೈಲು ನಿರ್ವಹಣೆಯನ್ನು ಪಡೆದುಕೊಂಡಿತ್ತು.

ಪ್ರವಾಸಿ ಪ್ಯಾಕೇಜ್‌ಗಳು

ಐಆರ್‌ಸಿಟಿಸಿ 6 ರಾತ್ರಿ 7 ಹಗಲುಗಳ ಪ್ರವಾಸಿ ಪ್ಯಾಕೇಜ್‌ ಪ್ರಯಾಣವನ್ನು ಭಾನುವಾರ ಆರಂಭಿಸಿದೆ. ಬೆಂಗಳೂರು ನಗರದಿಂದ ಹೊರಟಿರುವ ರೈಲು ಬಂಡೀಪುರ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ಐಹೊಳೆ, ಪಟ್ಟದಕಲ್ಲು ಮತ್ತು ಗೋವಾಕ್ಕೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ ಆಗಲಿದೆ.

ಪ್ರವಾಸಿ ಪ್ಯಾಕೇಜ್ 2

ಐಆರ್‌ಸಿಟಿಸಿ 3 ರಾತ್ರಿ 4 ಹಗಲುಗಳ ಮತ್ತೊಂದು ಪ್ಯಾಕೇಜ್ ಸಂಚಾರವನ್ನು ಮಾರ್ಚ್ 21ರಿಂದ ಆರಂಭಿಸಲಿದೆ. ಬೆಂಗಳೂರಿನಿಂದ ಹೊರಡುವ ರೈಲು ಮೈಸೂರು, ಹಂಪಿ, ಮಹಾಬಲಿಪುರಂಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ ಆಗಲಿದೆ.

ಗೋಲ್ಡನ್ ಚಾರಿಯಟ್ ಸಂಚಾರ

ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲಿನಲ್ಲಿ ಹಲವು ವಿಶೇಷತೆಗಳಿವೆ. ಐಆರ್‌ಸಿಟಿಸಿ ರೈಲು ಸಂಚಾರದ ಬಗ್ಗೆ ಟ್ವೀಟ್‌ ಮಾಡಿದೆ.


Spread the love

About Laxminews 24x7

Check Also

ಸಕ್ರೆಬೈಲು ಆನೆ ಬಾಲಣ್ಣನ ಕಿವಿ ಕತ್ತರಿಸಿದ ವೈದ್ಯರ ತಂಡ: ಚಿಕಿತ್ಸೆ ಕುರಿತು ಡಿಎಫ್ಒ ಹೇಳಿದ್ದಿಷ್ಟು

Spread the love ಶಿವಮೊಗ್ಗ: ಸಕ್ರೆಬೈಲು ಆನೆ‌ ಬಿಡಾರದ ಬಾಲಣ್ಣ ಎಂಬ ಹೆಸರಿನ ಸಾಕಾನೆಯ ಬಲ ಕಿವಿಯನ್ನು ಬೆಂಗಳೂರಿನ ವೈದ್ಯರ ತಂಡವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ