ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್-19 ದೃಢಪಟ್ಟ 833 ಹೊಸ ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದರೊಂದಿಗೆ ರಾಜ್ಯದಲ್ಲಿ ಒಟ್ಟು 9,58,417 ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 12,386ಕ್ಕೆ ತಲುಪಿದೆ. ಶುಕ್ರವಾರ ಗುಣಮುಖರಾದ 545 ಮಂದಿಯೂ ಸೇರಿದಂತೆ ಇದುವರೆಗೆ ಒಟ್ಟು 9,37,898 ಸೋಂಕಿತರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,114 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿ 125 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಲ್ಲಿ 6,008 ಸಾವಿರ ಸಕ್ರಿಯ ಪ್ರಕರಣ
ಬೆಂಗಳೂರಿನಲ್ಲಿ ಇಂದು 526 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ನಗರಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 4,10,181 ಆಗಿದೆ. ಇದರಲ್ಲಿ 3,99,656 ಸೋಂಕಿತರು ಗುಣಮುಖರಾಗಿದ್ದು, 4,516 ಮಂದಿ ಮೃತಪಟ್ಟಿದ್ದಾರೆ. ಇನ್ನೂ 6,008 ಸಕ್ರಿಯ ಪ್ರಕರಣಗಳು ಇವೆ.
ಉಳಿದಂತೆ ಕಲಬುರ್ಗಿ (262), ದಕ್ಷಣ ಕನ್ನಡ (232), ತುಮಕೂರಿನಲ್ಲಿ (210), ಮೈಸೂರು (188), ಉಡುಪಿ (117) ಬಳ್ಳಾರಿಯಲ್ಲಿ (103) ನೂರಕ್ಕಿಂತ ಹೆಚ್ಚು ಪ್ರಕರಣಗಳು ಸಕ್ರಿಯ ಪ್ರಕರಣಗಳಿವೆ.
ಇಂದಿನ 12/03/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/IqNtH051fr @PMOIndia @narendramodi @CMofKarnataka @BSYBJP @MoHFW_INDIA @drharshvardhan @mla_sudhakar @Comm_dhfwka @MDNHM_Kar @CovidIndiaSeva @KarnatakaVarthe @PIBBengaluru pic.twitter.com/kDLRYtsxzR
— K'taka Health Dept (@DHFWKA) March 12, 2021
Laxmi News 24×7