Breaking News

ಎಸ್​ಡಿಎ ಪರೀಕ್ಷೆ ಮುಂದೂಡಿಕೆ

Spread the love

ಬೆಂಗಳೂರು: ಮಾ.20 ಮತ್ತು 21ರಂದು ನಡೆಯಬೇಕಿದ್ದ ಎಸ್​ಡಿಎ (ದ್ವಿತೀಯ ದರ್ಜೆ ಸಹಾಯಕರು/ಕಿರಿಯ ಸಹಾಯಕರ) ಪರೀಕ್ಷೆಯನ್ನು ಮೂಂದೂಡಿ ಕೆಪಿಎಸ್​ಸಿ ಆದೇಶ ಹೊರಡಿಸಿದೆ.

2020ರ ಮೇ 14ರ ಅಧಿಸೂಚನೆಯನ್ವಯ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಜೂನ್​ 6 ಮತ್ತು 7ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಕರೊನಾ ಕಾರಣಕ್ಕೆ ಮೂಂದೂಡಲಾಗಿತ್ತು. ತದನಂತರ 2021ರ ಮಾರ್ಚ್​ 20ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಮಾರ್ಚ್​ 21ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನ ನಡೆಸಲು ದಿನಾಂಕವನ್ನು ಕೆಪಿಎಸ್​ಸಿ ಮರುನಿಗದಿ ಮಾಡಿತ್ತು. ಇದೀಗ ಈ ದಿನಾಂಕವನ್ನ ರದ್ದು ಮಾಡಿ ಎಕ್ಸಾಂ ಮುಂದೂಡಿದೆ. ಪರೀಕ್ಷೆ ನಡೆಯುವ ದಿನಾಂಕವನ್ನು ಮರುನಿಗದಿ ಮಾಡಿ ಶೀಘ್ರವೇ ಪ್ರಕಟಿಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ

ಜ.24ರಂದು ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮುನ್ನಾದಿನವೇ ಸೋರಿಕೆ ಆಗಿತ್ತು.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ