Breaking News

ಪರಿಣೀತಿ ಚೋಪ್ರಾ ಡಬಲ್ ಧಮಾಕಾ: 19ಕ್ಕೆ ಒಂದು, 26ಕ್ಕೆ ಮತ್ತೊಂದು ಸಿನಿಮಾ ರಿಲೀಸ್​!

Spread the love

ಬಾಲಿವುಡ್ ಸುಂದರಿ ಪರಿಣೀತಿ ಚೋಪ್ರಾ. ಬಿಟೌನ್‍ಗೆ ಎಂಟ್ರಿ ಕೊಟ್ಟಾಗ ಅದಾಗಲೇ ಮುಂಬೈನಲ್ಲಿ ಸೆಟಲ್ ಆಗಿದ್ದ ಪ್ರಿಯಾಂಕಾ ಚೋಪ್ರಾರ ತಂಗಿ ಎಂದು ಅವರ ನೆರಳಿನಲ್ಲಿಯೇ ಕರಿಯರ್ ಪ್ರಾರಂಭಿಸಿದರು. ಆದರೆ ಈಗ ಅತ್ತ ಪ್ರಿಯಾಂಕಾ ನಿಕ್ ಜೋನಸ್ ಮದುವೆಯಾಗಿ ಹಾಲಿವುಡ್‍ನತ್ತ ಮುಖ ಮಾಡಿದರೆ, ಇತ್ತ ಪರಿಣೀತಿ ಬಾಲಿವುಡ್‍ನಲ್ಲಿ ಬಿಂದಾಸ್ ಆಗಿ ಮಿಂಚುತ್ತಿದ್ದಾರೆ. ಎರಡು ತಿಂಗಳಲ್ಲಿ ಮೂರು ಸಿನಿಮಾಗಳು ರಿಲೀಸ್ ಆಗುತ್ತಿರುವುದೇ ಅದಕ್ಕೆ ಸಾಕ್ಷಿ. ಹೌದು, ಬಿ-ಟೌನ್ ಬ್ಯೂಟಿ ಪರಿಣೀತಿ ಚೋಪ್ರಾ ಸದ್ಯ ಸಿನಿಮಾಗಳ ಪ್ರಚಾರದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಕಳೆದ ಫೆಬ್ರವರಿ 26ರಂದು ಅವರು ನಟಿಸಿದ್ದ ದಿ ಗರ್ಲ್ ಆನ್ ದಿ ಟ್ರೈನ್ ಸಿನಿಮಾ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಅದರ ಬೆನ್ನಲ್ಲೇ ಇನ್ನೂ ಎರಡು ಚಿತ್ರಗಳು ಸದ್ಯ ತೆರೆಗೆ ಅಪ್ಪಳಿಸಲು ರೆಡಿಯಾಗಿವೆ. ಒಂದು ಮುಂದಿನ ಶುಭ ಶುಕ್ರವಾರ ರಿಲೀಸ್ ಆದರೆ, ಮತ್ತೊಂದು ಮಾರ್ಚ್ ಅಂತ್ಯಕ್ಕೆ ಥಿಯೇಟರ್ಗೆ​ ಎಂಟ್ರಿ ಕೊಡಲಿದೆ.

ದಿಬಾಕರ್ ಬ್ಯಾನರ್ಜಿ ನಿರ್ದೇಶನದ ಡಾರ್ಕ್ ಕಾಮಿಡಿ ಸಿನಿಮಾ ಸಂದೀಪ್ ಔರ್ ಪಿಂಕಿ ಫರಾರ್ ಇದೇ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಅರ್ಜುನ್ ಕಪೂರ್ ಹಾಗೂ ಪರಿಣೀತಿ ಚೋಪ್ರಾ ನಾಯಕ, ನಾಯಕಿಯಾಗಿದ್ದು, ಪಂಕಜ್ ತ್ರಿಪಾಠಿ, ಜೈದೀಪ್ ಅಹ್ಲಾವತ್, ರಘುಬೀರ್ ಯಾದವ್, ನೀನಾ ಗುಪ್ತಾ, ಸಂಜಯ್ ಮಿಶ್ರಾ ಆಗೂ ಅರ್ಚನಾ ಪೂರಣ್ ಸಿಂಗ್ ಪ್ರಮುಖ ತಾರಾಗಣದಲ್ಲಿದ್ದಾರೆ.

ವಿಶೇಷ ಅಂದರೆ ಈ ಚಿತ್ರದಲ್ಲಿ ಪರಿಣೀತಿ ಚೋಪ್ರಾ ಹರಿಯಾಣ ಮೂಲದ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಸಂದೀಪ್ ಔರ್ ಫಿಂಕಿ ಪರಾರ್ ಶೂಟಿಂಗ್ 2017ರ ನವೆಂಬರ್​ನಲ್ಲೇ ಪ್ರಾರಂಭವಾಗಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿ ಕಳೆದ ವರ್ಷ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಆದರೆ ಕಳೆದ ವರ್ಷ ಕೊರೊನಾ ಲಾಕ್‍ಡೌನ್‍ನಿಂದಾಗಿ ಮತ್ತೆ ತಡವಾಗಿತ್ತು. ಹೀಗೆ ಎರಡು ಬಾರಿ ರಿಲೀಸ್‍ಅನ್ನು ಮುಂದೂಡಿದ್ದ ಚಿತ್ರತಂಡ ಈಗ ಇದೇ ಮಾರ್ಚ್ 19ರಂದು ಅಂತೂ ತೆರೆಗೆ ಬರಲು ರೆಡಿಯಾಗಿದೆ.

ನ್ನು ಸಂದೀಪ್ ಔರ್ ಪಿಂಕಿ ಫರಾರ್ ರಿಲೀಸ್ ಆದ ಒಂದೇ ವಾರದ ಬಳಿಕ ಅರ್ಥಾತ್ ಮಾರ್ಚ್ 26ರಂದು ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‍ರ ಬಯೋಪಿಕ್, ಸೈನಾ ರಿಲೀಸ್ ಆಗಲಿದೆ. ಒಲಿಂಪಿಕ್ಸ್, ವರ್ಲ್ಡ್​ ಚಾಂಪಿಯನ್‍ ಶಿಪ್ಸ್, ಕಾಮನ್‍ವೆಲ್ತ್ ಗೇಮ್ಸ್, ಏಷಿಯನ್ ಗೇಮ್ಸ್ ಹೀಗೆ ಬರೋಬ್ಬರಿ 24 ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಗೆಲುವಿನ ನಗೆ ಬೀರಿರುವ ದಿಗ್ಗಜೆ. ಇಂತಹ ಕ್ರೀಡಾತಾರೆಯ ಬಯೋಪಿಕ್ 2017ರಲ್ಲೇ ಅನೌನ್ಸ್ ಆಗಿತ್ತು.

ಅಮೋಲ್ ಗುಪ್ತೆ ನಿರ್ದೇಶನದಲ್ಲಿ ಶ್ರದ್ಧಾ ಕಪೂರ್ ಸೈನಾ ನೆಹ್ವಾಲ್ ಪಾತ್ರದಲ್ಲಿ ನಟಿಸಬೇಕಿತ್ತು. ಅದರಂತೆ ಶೂಟಿಂಗ್ ಕೂಡ ಪ್ರಾರಂಭವಾಯಿತು. ಆದರೆ ಹಠಾತ್ ಆಗಿ ಬೇರೆ ಚಿತ್ರದ ಶೂಟಿಂಗ್‍ಗೆ ಡೇಟ್ಸ್ ಸಮಸ್ಯೆಯಾಗುತ್ತಿದೆ ಎಂದು ಶ್ರದ್ಧಾ ಕಪೂರ್ ಸೈನಾ ಬಯೋಪಿಕ್‍ನಿಂದ ಹೊರನಡೆದರು. ನಂತರ 2019ರ ಮಾರ್ಚ್‍ನಲ್ಲಿ ಚಿತ್ರತಂಡ ಪರಿಣೀತಿ ಚೋಪ್ರಾರನ್ನು ಆಯ್ಕೆ ಮಾಡಿಕೊಂಡಿತು. ಅದರಂತೆ ಹಲವು ದಿನಗಳ ಕಾಲ ಪರಿಣೀತಿ ಕೂಡ ಬ್ಯಾಡ್ಮಿಂಟನ್ ತರಬೇತಿ ಪಡೆದರು. ಈಗ ಇದೇ ಮಾರ್ಚ್ 26ರಂದು ಸೈನಾ ತೆರೆಗೆ ಬರಲು ರೆಡಿಯಾಗಿದೆ. ಹೀಗೆ ಪರಿಣೀತಿ ಚೋಪ್ರಾ ನಟಿಸಿರುವ ಎರಡು ಸಿನಿಮಾಗಳು ಎರಡು ವಾರಗಳಲ್ಲಿ ರಿಲೀಸ್ ಆಗಲಿವೆ.

https://www.instagram.com/p/CMMSexpj2dX/?utm_source=ig_embed


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ