Breaking News

ಬೆಳಗಾವಿ ಗಡಿಯಲ್ಲಿ ಜಾರಿಯಾಗದ ಕಟ್ಟುನಿಟ್ಟಿನ ಕ್ರಮ; ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಕೊರೋನಾತಂಕ

Spread the love

ಬೆಳಗಾವಿ: ಸರ್ಕಾರ ಕೋವಿಡ್ ಎರಡನೇ ಅಲೆಯಿಂದ ಜನರನ್ನ ರಕ್ಷಣೆ ಮಾಡಬೇಕು ಅಂತ ಟಫ್ ರೂಲ್ಸ್ ಜಾರಿಗೆ ತಂದಿದೆ.‌ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಎಂಟ್ರಿಯಾಗ ಬೇಕಾದರೆ ಖಾಸಗಿ ಸರ್ಕಾರಿ ವಾಹನಗಳ ಮೂಲಕ ಬರುವವರು ಕೈಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಹಿಡಿದೇ ಬರಬೇಕು ಅಂತಿದೆ ಆದರೆ ಕರ್ನಾಟಕದ ಗಡಿಯಲ್ಲಿ ಕಟ್ಟುನಿಟ್ಟಾದ ಕ್ರಮ ಜಾರಿಗೆ ಬರ್ತಿಲ್ಲಾ. ಬಾರ್ಡರ್ ನಲ್ಲಿ ಚೆಕ್ ಪೊಸ್ಟ್ ನಿರ್ಮಾಣ ಆಗಿದೆ ಖಾಸಗಿ ಕಾರಿನಲ್ಲಿ ಬರೋರನ್ನ ಮಾತ್ರ ತಪಾಸಣೆ ಮಾಡುತ್ತಿರುವ ಪೊಲೀಸರು ಬೈಕ್ ಬಸ್ ಹತ್ತಿದವರನ್ನ ಸುಮ್ಮನೆ ಬಿಟ್ಟು ಬಿಡುತ್ತಿದ್ದಾರೆ. ಈಗಲೂ ಜನ ರಾಜಾರೋಷವಾಗಿ ರಾಜ್ಯಕ್ಕೆ ಬರುತ್ತಲೆ ಇದ್ದಾರೆ.

ಹೌದು ಇತ್ತೀಚಿಗೆ ಸರ್ಕಾರ ಅರೋಗ್ಯ ಇಲಾಖೆ ಸಚಿವ ಸುಧಾಕರ್ ಕರೋನಾ ಎರಡನೇ ಅಲೆಯಿಂದ ರಾಜ್ಯವನ್ನ ತಪ್ಪಿಸೋಕೆ ಹೊಸದಾದ ಟಫ್ ರೂಲ್ಸ್ ಜಾರಿ ಮಾಡಿದ್ದು ರಾಜ್ಯಕ್ಕೆ ಮಹಾರಾಷ್ಟ್ರದಿಂದ ಎಂಟ್ರಿ ಯಾಗುವ ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ಆರ್ ಟಿ ಪಿ ಸಿ ಆರ್ ಅಥವಾ ರಾಪಿಡ್ ಟೆಸ್ಟ್ ರಿಪೋರ್ಟ್ ಹಿಡಿದೆ ರಾಜ್ಯಕ್ಕೆ ಬರಬೇಕು ಅಂತ ಆದೇಶ ಮಾಡಿದ್ದಾರೆ.ಆದ್ರೆ ಈ ಆದೇಶ ಮಾತ್ರ ಬರಿ ನೆಪಕ್ಕೆ ಅನ್ನುವ ಹಾಗಾಗಿದೆ. ಮೊದ ಮೊದಲು ಸರ್ಕಾರದ ಆದೇಶ ಪಾಲಿಸಿದ ಪೊಲೀಸರು ಗಡಿಯಲ್ಲಿ ನಿಂತು ಹೊರಗಡೆಯಿಂದ ಬರುವ ಕಾರು ಜೀಪು ತಡೆದು ಪರಿಶೀಲನೆ ನಡೆಸಿ ಕೋವಿಡ್ ರಿಪೋರ್ಟ್ ಇಲ್ಲದೆ ಇರುವ ವಾಹನ ಹಾಗೂ ಜನರನ್ನು ಮರಳಿ ವಾಪಸ್ ಮಹಾರಾಷ್ಟ್ರಕ್ಕೆ ಕಳಿಸುತ್ತಿದ್ದರು. ಆದರೆ ಕೆಲ ದಿನಗಳು ಕಳೆಯುತ್ತಿದ್ದಂತೆ ಗಡಿಯಲ್ಲಿ ಕಾಟಾಚಾರದ ತಪಾಸಣೆ ನಡೆಯುತ್ತಿದೆ.

ಮಹಾರಾಷ್ಟ್ರದಿಂದ ಬರುವವರನ್ನ ತಡೆದು ಎಲ್ಲಿಂದ ಬಂದಿದ್ದು ಎಲ್ಲಿಗೆ ಹೊರಟಿದ್ದಿರಿ ಎಂದು ಕೆಳಿ ಯಾವುದೆ ಕೊರೊನಾ ವರದಿ ಪರಿಶೀಲನೆ ನಡೆಸದೆ ವಾಹನಗಳ ಬಿಟ್ಟು ಕಳಿಸಲಾಗುತ್ತಿದೆ. ಇನ್ನು ನೆಪ ಮಾತ್ರಕ್ಕೆ ಕಾರುಗಳನ್ನ ತಡೆಯುತ್ತಿರುವ ಜಿಲ್ಲಾಡಳಿತ ಬೈಕ್‌ ಮೇಲೆ ಬರೋರನ್ನ ಯಾವುದೇ ಪ್ರಶ್ನೆ ಮಾಡುತ್ತಿಲ್ಲ ಹೀಗಾಗಿ ಬೈಕ್ ಮೇಲೆ‌ ಬರೋರಿಂದ ರಾಜ್ಯದಲ್ಲಿ ಕರೋನ ಹರಡಲ್ವೆ ಅಂತ ಜನ ಸಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ಮಹಾರಾಷ್ಟ್ರದಿಂದ ಕಾರು ಹಾಗೂ ಬೈಕ್ ಮೂಲಕ ರಾಜಾರೋಷವಾಗಿ ಪೊಲೀಸರ ಎದುರಲ್ಲೆ ಜನ ಎಂಟ್ರಿ ಕೊಡ್ತಿದ್ರು ಸಹ ಪೊಲೀಸರಾಗಲಿ ಅಥವಾ ಆರೋಗ್ಯ ಇಲಾಖೆಯ ಸಿಬ್ಬಂದಿಯಾಗಲಿ ಅದನ್ನ ಪ್ರಶ್ನೆ ಮಾಡುತ್ತಿಲ್ಲ. ಇನ್ನು ಇದು ಈ ಕಥೆಯಾದ್ರೆ ಸರ್ಕಾರಿ ಬಸ್ಗಳಲ್ಲಿ ಬರೋರ ಕಥೆನೆ ಬೇರೆ ಯಾಗಿದೆ. ಜಿಲ್ಲಾಡಳಿತ ಕೋವಿಡ್ ರಿರ್ಪೋಟ್ ಇದ್ರೆ ಮಾತ್ರ ಪ್ರಯಾಣಿಕರನ್ನ ಬಸ್ ನಲ್ಲಿ ಕರೆ ತನ್ನಿ ಎಂದು ಆದೇಶಿಸಿದೆ.

ಆದ್ರೆ ಸರ್ಕಾರಿ ಬಸ್ ನಲ್ಲಿ ಮಾತ್ರ ಆದೇಶ ಪಾಲನೆ ಆಗುತ್ತಿಲ್ಲಾ ಮಹಾರಾಷ್ಟ್ರದ ಕೊಲ್ಲಾಪುರ, ಪುಣೆ, ಮುಂಬೈ, ಮೀರಜ, ಹಾಗೂ ಸಾಂಗಲಿ ಜಿಲ್ಲೆಗಳಿಂದ ಬರುವವರು ಯಾವುದೆ ಕೋವಿಡ್ ರಿಪೋರ್ಟ್ ಇಲ್ಲದೆ ರಾಜಾರೋಷವಾಗಿ ಬಸ್ ಗಳ ಮೂಲಕ ರಾಜ್ಯಕ್ಕೆ ಬರುತ್ತಿದ್ದಾರೆ. ಮಹಾರಾಷ್ಟ್ರ ಸಾರಿಗೆ ಬಸ್ ಗಳ ಮೂಲಕವೂ ಸಾವಿರಾರು ಜನ ನಿತ್ಯವೂ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

  ಪಶ್ಚಿಮ ಬಂಗಾಳದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಬಂಧನದ ವಾರೆಂಟ್ ತಡೆ ಹಿಡಿದ ಸುಪ್ರೀಂ ಕೋರ್ಟ್ ಒಟ್ಟಿನಲ್ಲಿ ರಾಜ್ಯ ಸರ್ಕಾರವೇನೋ ಜನರ ಹಿತದೃಷ್ಠಿಯಿಂದ ಸ್ಟ್ರಿಕ್ಟ್ ರೂಲ್ಸ್ ಆಂಡ್ ರೆಗ್ಯೂಲೇಷನ್ಸ್ ತರುತ್ತಲೆ ಇದೆ.‌ ಆದ್ರೆ ಇದಕ್ಕೆ ಬೇಕಾದ ವ್ಯವಸ್ಥೆಗಳನ್ನ ಮಾತ್ರ ಮಾಡುತ್ತಿಲ್ಲ. ಈಗಲೂ ಸಹ ರಾಜ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೆಪ ಮಾತ್ರಕ್ಕೆ ತಪಾಸಣೆ ನಡೆಯುತ್ತಿದ್ದು ಜನ ಕಳ್ಳ ಮಾರ್ಗಗಳನ್ನ ಕಂಡುಕೊಂಡಿದ್ದಾರೆ. ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶ ಮಾಡಲು 10 ಕ್ಕೂ ಹೆಚ್ಚು ಹಳ್ಳಿಗಳ ಮೂಲಕ ರಸ್ತೆಗಳಿದ್ದು ಆ ಮೂಲಕ ರಾಜ್ಯಕ್ಕೆ ಜನ ಆಗಮಿಸುತ್ತಿದ್ದಾರೆ.

ಅಲ್ಲದೆ ವಾರದ ಮಟ್ಟಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಪಾಸಣೆ ನಡೆಸಿ ಈಗ ಯಾವುದೇ ತಪಾಸಣೆ ನಡೆಸದೆ ಗಡಿಯಲ್ಲಿನ ಸಿಬ್ಬಂದಿಗಳು ನಿಷ್ಕ ಕಾಳಜಿ ತೋರುತ್ತಿದ್ದು ಜಿಲ್ಲೆಯಲ್ಲಿ ಕೊರೊನಾ ಹಬ್ಬುವ ಭೀತಿ ಎದುರಾಗಿದೆ.


Spread the love

About Laxminews 24x7

Check Also

ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ.

Spread the love ಹುಕ್ಕೇರಿ : ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ವಿಜಯಶಾಲಿಗಳಾಗಿ – ಇಕ್ಬಾಲ್ ಪೀರಜಾದೆ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ