Breaking News

32 ವರ್ಷ ಕಲ್ಲು ತಿಂದೇ ಬದುಕುತ್ತಿದ್ದಾನೀತ, ವರ್ಷಗಳ ಹೊಟ್ಟೆನೋವಿಗಿದು ಔಷಧವಾಯ್ತಂತೆ!

Spread the love

ಮುಂಬೈ: ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬ ಗಾದೆಮಾತಿದೆ. ಚಿಕ್ಕಚಿಕ್ಕ ವಿಷಯಕ್ಕೂ ಕಿರಿಕ್‌ ಮಾಡುತ್ತಿದ್ದರೆ, ಪತ್ನಿ ಮಾಡಿದ ಎಲ್ಲದರಲ್ಲಿಯೂ ತಪ್ಪು ಹುಡುಕುತ್ತಿದ್ದರೆ ಅಂಥ ಗಂಡನಿಗೆ ಹೀಗೆ ಹೇಳುವುದುಂಟು. ಅಂದರೆ ಕಲ್ಲು ಇಲ್ಲಿ ನೆಗೆಟಿವ್‌ ಚಿಹ್ನೆ ತೋರಿಸುತ್ತದೆ.

ಆದರೆ ಇಲ್ಲೊಬ್ಬ ಭೂಪ ನಿಜವಾಗಿಯೂ ಕಲ್ಲನ್ನು ತಿಂದೇ ಜೀವಿಸುತ್ತಿದ್ದಾನೆ. ಅದೂ ಒಂದೆರಡು ತಿಂಗಳೋ, ವರ್ಷವೋ ಅಲ್ಲ… ಬರೋಬ್ಬರಿ 32 ವರ್ಷ! ಆಹಾರದ ಬದಲಿಗೆ ಪ್ರತಿ ದಿನ 250 ಗ್ರಾಂ ಕಲ್ಲನ್ನು ಆಹಾರವಾಗಿ ತಿಂದು ಜೀವನ ನಡೆಸುತ್ತಿದ್ದಾನೆ. ಅಂದರೆ ಈತನಿಗೆ ಕಲ್ಲೇ ಆಹಾರ!

ಇಂಥ ವ್ಯಕ್ತಿ ಇರುವುದು ಮಹಾರಾಷ್ಟ್ರದ ಸತ್ರಾ ಜಿಲ್ಲೆಯ ಅಡಾರ್ಕಿ ಖುರ್ದಾ ಗ್ರಾಮದಲ್ಲಿ. ಈತನ ಹೆಸರು ರಾಮ್‍ದಾಸ್ ಬೋಡ್ಕ್. ವಯಸ್ಸು 78.

ಇದಕ್ಕೆ ಕಾರಣವೂ ವಿಚಿತ್ರವಾಗಿದೆ. ಹಲವು ವರ್ಷಗಳಿಂದ ಈತನಿಗೆ ಹೊಟ್ಟೆ ನೋವು ಬಾಧಿಸುತ್ತಿದ್ದಂತೆ. ಕಂಡಕಂಡಲ್ಲಿ ಚಿಕಿತ್ಸೆ ಪಡೆದರೂ ಗುಣಮುಖವಾಗಲಿಲ್ಲ. ಆಗ ಹಳ್ಳಿಯ ಹಿರಿಯ ಮಹಿಳೆಯೊಬ್ಬರು ಕಲ್ಲು ತಿನ್ನುವಂತೆ ಸಲಹೆ ನೀಡಿದ್ದರಂತೆ. ಆಕೆಯ ಮಾತಿನಂತೆ ಕಲ್ಲು ತಿನ್ನಲು ಆರಂಭವಾಗಿದೆ. ನಂತರ ಅದೇ ನಿತ್ಯದ ಆಹಾರವೂ ಆಗಿದ್ದು, ಹೊಟ್ಟೆನೋವೂ ಕಮ್ಮಿಯಾಯಿತಂತೆ!

ರಾಮ್‍ದಾಸ್ ಕಲ್ಲು ತಿನ್ನುವ ಫೋಟೋ ವೈರಲ್ ಆಗಿದ್ದು, ಸಹಸ್ರಾರು ಕಮೆಂಟ್‌ಗಳು ಬರುತ್ತಿವೆ. ಆದರೆ ವಿಚಿತ್ರ ಎಂದರೆ ಈತ ಕಲ್ಲು ತಿನ್ನುವುದು ಮನೆಯವರಿಗೆ ತಿಳಿದಿಲ್ಲ. ಅವರು ಇದನ್ನು ನಿರಾಕರಿಸಿದ್ದಾರೆ. ಇದಕ್ಕೆ ಕಾರಣ, ರಾಮದಾಸ್‌ ಯಾರಿಗೂ ತಿಳಿಯದಂತೆ ಕಲ್ಲು ತಿನ್ನುತ್ತಾನಂತೆ.

ಹೊಟ್ಟೆನೋವು ಬಂತೆಂದು ನೀವು ಹಾಗೆ ಮಾಡಲು ಹೋಗಬೇಡಿ ಮತ್ತೆ! ಏಕೆಂದರೆ ರಾಮ್‍ದಾಸನ ಈ ಹವ್ಯಾಸ ಮಾನಸಿಕ ಕಾಯಿಲೆ ಎಂದಿದ್ದಾರೆ ವೈದ್ಯರು!


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ