Breaking News

ಯುವರತ್ನ ಕ್ರೇಜ್: ‘ಇದು ಜಸ್ಟ್ ಬಿಗಿನಿಂಗ್, ಮುಂದೆ ನೀವೇ ನೋಡ್ತಿರಲ್ಲ’

Spread the love

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.

ಯುವರತ್ನನ ಎಂಟ್ರಿಗೆ ನಾಲ್ಕು ವಾರ ಮಾತ್ರ ಬಾಕಿಯಿದ್ದು, ಅಪ್ಪು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಯುವರತ್ನ ಸದ್ಯದಲ್ಲೇ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆಯಾಗುತ್ತಿದೆ.

 

ರಿಲೀಸ್‌ಗೆ ಒಂದು ತಿಂಗಳ ಮುಂಚೆಯೇ ಅಭಿಮಾನಿಗಳು ಜಾತ್ರೆ ಮಾಡ್ತಿದ್ದಾರೆ. ಅಪ್ಪು ಅವರ ಕಟೌಟ್‌ಗೆ ದುಡ್ಡಿನ ಮಾಲೆ ಹಾಕಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟರ್‌ಗೆ ಸಂತೋಷ್ ಆನಂದ್ ರಾಮ್ ಸಹ ಖುಷಿ ವ್ಯಕ್ತಪಡಿಸಿದ್ದಾರೆ.

ಯುವರತ್ನ ಸಿನಿಮಾದ ಕನ್ನಡ ಹಾಗೂ ತೆಲುಗು ವರ್ಷನ್ ವಿತರಣೆ ಹಕ್ಕು ಈಗಾಗಲೇ ಮಾರಾಟವಾಗಿದೆ. ಆಂಧ್ರ-ತೆಲಂಗಾಣ, ಕರ್ನಾಟಕ, ಭಾರತದ ಇತರೆ ರಾಜ್ಯಗಳು ಹಾಗೂ ವಿದೇಶದಲ್ಲೂ ಯುವರತ್ನ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ.

ಹೊಂಬಾಳೆ ಫಿಲಂಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಎಸ್ ತಮನ್ ಸಂಗೀತ ನೀಡಿದ್ದಾರೆ. ಪುನೀತ್ ಜೊತೆ ಧನಂಜಯ್, ವಸಿಷ್ಠ ಸಿಂಹ, ಸಯೇಶಾ ಸೈಗಲ್, ಶರತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.


Spread the love

About Laxminews 24x7

Check Also

ಭಾರತಕ್ಕೆ ಚಾಂಪಿಯನ್ ಟ್ರೋಫಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ*

Spread the love ಭಾರತಕ್ಕೆ ಚಾಂಪಿಯನ್ ಟ್ರೋಫಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ* *ಬೆಂಗಳೂರು-* ದುಬೈನಲ್ಲಿ ನಡೆದ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ