Breaking News

ಜೈಲು ಪಾಲಾದ ಸಿಡಿಪಿಓಗಳು!

Spread the love

ವಿಜಯಪುರ : ಇಬ್ಬರು ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು ಮೂವರು ಸಿಡಿಪಿಓ ಗಳನ್ನು ಪೊಲೀಸರು ಜೈಲಿಗಟ್ಟಿರುವ ಘಟನೆ ನಡೆದಿದೆ.

ಜಮಖಂಡಿಯ ಗೋಪಾಲ್ ತೇಲಿ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಗಿರೀಶ್ ತೇಲಿ, ಮಹಾದೇವ ತೇಲಿ ಎಂಬ ಅಧಿಕಾರಿಗಳು ಅಂಗನವಾಡಿ ಮಕ್ಕಳಿಗೆ ಸೇರಬೇಕಿದ್ದ ಕೆಎಂಎಫ್ ಹಾಲಿನ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಜಮಖಂಡಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಹಾಲಿನ ಪ್ಯಾಕೆಟ್ ಗಳನ್ನು ವಶಕ್ಕೆ ಪಡೆದಿದ್ದರು.

ಈ ಕುರಿತು ತನಿಖೆ ನಡೆದಿತ್ತು. ಈ ತನಿಖೆಯಲ್ಲಿ ಮೂವರು ಸಿಡಿಪಿಓಗಳು ಅಕ್ರಮ ನಡೆಸಿದ್ದು, ಬೆಳಕಿಗೆ ಬಂದಿತ್ತು. ಹೀಗಾಗಿ ವಿಜಯಪುರ ನಗರ ಸಿಡಿಪಿಓ ನಿರ್ಮಲಾ ಸುರಪೂರ, ಗ್ರಾಮೀಣ ಸಿಡಿಪಿಓ ಗೀತಾ ಗುತ್ತರಗಿಮಠ, ಬಾಗಲಕೋಟೆ ಜಿಲ್ಲೆ ಬೀಳಗಿ ಸಿಡಿಪಿಓ ಮಹಾದೇವಪ್ಪ ಇರನಾಳ ಅವರನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ


Spread the love

About Laxminews 24x7

Check Also

22 ಕೇಸ್‌ನ 36 ಜನ ಅರೆಸ್ಟ್ – 1.27 ಕೋಟಿ ಮೌಲ್ಯದ ಚಿನ್ನಾಭರಣ, 2 ಕಾರು, 17 ಬೈಕ್ ಜಪ್ತಿ

Spread the loveವಿಜಯಪುರ: ಚಿನ್ನಾಭರಣ, ಬೆಳ್ಳಿ, 2 ಕಾರು, 17 ಬೈಕ್ ಜಪ್ತಿ ಸೇರಿದಂತೆ 1.27 ಕೋಟಿ ರೂ. ಮೌಲ್ಯದ ವಸ್ತುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ