Breaking News

ದೆಹಲಿಯಲ್ಲಿ ರಾಜ್ಯ ಶಾಲಾ ಶಿಕ್ಷಣ ಮಂಡಳಿಗೆ ರಾಜ್ಯ ಸರ್ಕಾರ ಒಪ್ಪಿಗೆ: ಕೇಜ್ರಿವಾಲ್

Spread the love

ನವದೆಹಲಿ : ದೆಹಲಿಯಲ್ಲಿ ರಾಜ್ಯ ಶಾಲಾ ಶಿಕ್ಷಣ ಮಂಡಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.

ಕ್ಯಾಬಿನೆಟ್ ಸಭೆಯ ಬಳಿಕ ಈ ಬಗ್ಗೆ ಮಾತನಾಡಿರುವ ಅರವಿಂದ್ ಕೇಜ್ರಿವಾಲ್, ರಾಜ್ಯದಲ್ಲಿ 1000 ಸರ್ಕಾರಿ ಶಾಲೆಗಳು ಮತ್ತು 1700 ಖಾಸಗಿ ಶಾಲೆಗಳು ಇವೆ. ಎಲ್ಲಾ ಸರ್ಕಾರಿ ಶಾಲೆಗಳನ್ನು ಮತ್ತು ಬಹುಪಾಲು ಖಾಸಗಿ ಶಾಲೆಗಳು ಸಿಬಿಎಸ್ ಸಿ ಯನ್ನು ಅನುಸರಿಸುತ್ತಿವೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ 20-25 ಸರ್ಕಾರಿ ಶಾಲೆಗಳನ್ನು ರಾಜ್ಯ ಶಿಕ್ಷಣ ಮಂಡಳಿಗೆ ಒಳಪಡಿಸಲಾಗುವುದು. ಶಾಲಾ ಆಡಳಿತಾಧಿಕಾರಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಚರ್ಚಿಸಿದ ಈ ನಿರ್ಧಾರಕ್ಕೆ ಬರಲಾಗುವುದು ಎಂದರು.

ಇನ್ನು ರಾಜ್ಯದ ಎಲ್ಲಾ ಶಾಲೆಗಳು ನಾಲ್ಕರಿಂದ ಐದು ವರ್ಷಗಳಲ್ಲಿ ರಾಜ್ಯ ಶಿಕ್ಷಣ ಮಂಡಳಿಗೆ ಸ್ವಯಂ ಪ್ರೇರಿತವಾಗಿ ಒಳಪಡುತ್ತವೆ ಎಂದರು.


Spread the love

About Laxminews 24x7

Check Also

ವಸತಿ ಶಾಲೆ ಅರ್ಜಿ ಸಲ್ಲಿಸಲು ಫೆ.7ರವರೆಗೆ ಅವಕಾಶ – ಕೆಇಎ

Spread the loveಬೆಂಗಳೂರು : 2026ನೇ ಸಾಲಿಗೆ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಹತ್ತಿರದ ವಸತಿ ಶಾಲೆ/ಕಾಲೇಜುಗಳ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ