Breaking News

ತೈಲ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಿರುವುದು ಬೆಲೆ ಏರಿಕೆಗೆ ಮೂಲ ಕಾರಣ

Spread the love

ನವದೆಹಲಿ: ಏಪ್ರಿಲ್ ತಿಂಗಳಲ್ಲಿ ತೈಲ ಉತ್ಪಾದನೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಒಪೆಕ್ ಹಾಗೂ ಒಪೆಕ್ ಮಿತ್ರ ರಾಷ್ಟ್ರಗಳು ನಿರ್ಧಾರ ಕೈಗೊಂಡಿವೆ. ತೈಲ ರಫ್ತು ರಾಷ್ಟ್ರಗಳ ಒಕ್ಕೂಟ(ಒಪೆಕ್‌) ತೈಲ ಉತ್ಪಾದನೆಯನ್ನು ಕಡಿತವನ್ನು ಮುಂದುವರೆಸಿದ್ದರಿಂದ ತೈಲ ಬೆಲೆ ಏರಿಕೆಯಾಗಿದೆ.

ಏಪ್ರಿಲ್ ನಲ್ಲಿ ಖರೀದಿಸಲಾಗುವ ಡಬ್ಲ್ಯೂಟಿಐ (ವೆಸ್ಟ್‌ ಟೆಕ್ಸಾಸ್ ಇಂಟರ್ಮಿಡಿಯೆಟ್) ಕಚ್ಚಾ ತೈಲ ಬೆಲೆಯನ್ನು 2.55 ಡಾಲರ್ ಗೆ ಏರಿಕೆ ಮಾಡಲಾಗಿದ್ದು, ಪ್ರತಿ ಬ್ಯಾರಲ್ ಬೆಲೆ ನ್ಯೂಯಾರ್ಕ್ ಮರ್ಕೆಂಟೈಲ್ ಎಕ್ಸ್ಚೇಂಜ್ ನಲ್ಲಿ 63.83 ಡಾಲರ್ ಆಗಿದೆ. ಬ್ರೆಂಟ್ ಕಚ್ಚಾ ತೈಲದರ ಮೇ ತಿಂಗಳಿನಿಂದ $2.67 ಏರಿಕೆಯಾಗಲಿದ್ದು, ಲಂಡನ್ ಐಸಿಇ ಫ್ಯೂಚರ್ಸ್ ಎಕ್ಸ್ ಚೇಂಜ್ ನಲ್ಲಿ ಪ್ರತಿ ಬ್ಯಾರೆಲ್ ತೈಲಕ್ಕೆ 66.74 ಡಾಲರ್ ಆಗಿರಲಿದೆ ಎಂದು ವರದಿಗಳು ತಿಳಿಸಿವೆ.

ಅಷ್ಟೇ ಅಲ್ಲದೆ, ಸೌದಿ ಅರೇಬಿಯಾ ಪ್ರತಿ ದಿನ 1 ಮಿಲಿಯನ್ ಬ್ಯಾರಲ್ ಉತ್ಪಾದನೆ ಮಾಡಲು ಮುಂದಾಗಲಿದೆ. ಕ್ರಮೇಣ ಹೆಚ್ಚಿಸುವ ಬಗ್ಗೆ ಮುಂದಿನ ತಿಂಗಳುಗಳಲ್ಲಿ ನಿರ್ಧರಿಸಲಾಗುತ್ತದೆ. ರಷ್ಯಾ ಹಾಗೂ ಕಜಖಸ್ಥಾನ್ ಮಾತ್ರ ಅನುಕ್ರಮವಾಗಿ ಪ್ರತಿ ದಿನ 130,000 ಹಾಗೂ 20,000 ಬ್ಯಾರಲ್ ಉತ್ಪಾದನೆ ಮಾಡಲು ಅವಕಾಶಗಳಿವೆ ಎಂದು ಹೇಳಲಾಗುತ್ತಿದೆ


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ