ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣ ರಂಗೇರಿದೆ. ಅಧಿಕಾರದ ಚುಕ್ಕಾಣಿಯನ್ನ ಹಿಡಿಯೋಕೆ ಪ್ರತಿಯೊಂದು ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯತಂತ್ರವನ್ನ ರೂಪಿಸುತ್ತಿವೆ,
ಬಂಗಾಳದಲ್ಲಿ ಚುನಾವಣಾ ಕಾವು ಜೋರಾಗಿರೋದ್ರ ಜೊತೆ ಜೊತೆಗೇ ಕೊಲ್ಕತ್ತಾದ ಪ್ರಸಿದ್ಧ ಸಿಹಿ ತಿಂಡಿಗಳ ಮಳಿಗೆ ಬಲರಾಮ್ ಮಲ್ಲಿಕ್ ರಾಧರಮನ್ ಮಲ್ಲಿಕ್ ಬಂಗಾಳಿ ಜನತೆಯ ಪ್ರಸಿದ್ಧ ತಿಂಡಿ ಸಂದೇಶ್ಗೆ ಹೊಸ ಟ್ವಿಸ್ಟ್ ನೀಡಿದೆ.
ಸಿಹಿ ತಿಂಡಿಗಳ ಮೇಲೆ ಪಕ್ಷದ ಚಿಹ್ನೆ, ರಾಜಕೀಯ ನಾಯಕರ ಮುಖವನ್ನ ಚಿತ್ರಿಸೋದ್ರ ಮೂಲಕ ಸಂದೇಶಕ್ಕೆ ಹೊಸ ರೂಪವನ್ನ ನೀಡಿದೆ. ತೃಣಮೂಲ ಕಾಂಗ್ರೆಸ್, ಬಿಜೆಪಿ, ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಸೇರಿದಂತೆ ಹಲವು ಬಗೆಯ ಸಂದೇಶ ಲಭ್ಯವಿದೆ.
ರಾಜ್ಯದಲ್ಲಿ ಯಾವ ಟ್ರೆಂಡ್ ನಡೆಯುತ್ತಿರುತ್ತೋ ಅದೇ ವಿಷಯವನ್ನ ಇಟ್ಟುಕೊಂಡು ಪ್ರತಿ ವರ್ಷ ಸ್ವೀಟ್ನ್ನು ತಯಾರಿಸುತ್ತೇವೆ. ಕ್ರಿಕೆಟ್ ಹಾಗೂ ಫುಟ್ಬಾಲ್ ವಿಶ್ವಕಪ್ ಸಂದರ್ಭದಲ್ಲೂ ಈ ಮಾದರಿಯ ಸಿಹಿ ತಿಂಡಿಗಳನ್ನ ತಯಾರಿಸಿದ್ದೆವು. ಈ ಬಾರಿ ಚುನಾವಣಾ ವಿಚಾರ ಹೆಚ್ಚು ಹೈಲೈಟ್ ಆಗಿರೋದ್ರಿಂದ ಇದೇ ವಿಷಯವನ್ನ ಆಯ್ಕೆ ಮಾಡಿಕೊಂಡ್ವಿ ಎಂದು ಶಾಪ್ ಮಾಲೀಕ ಸುದೀಪ್ ಮಲ್ಲಿಕ್ ಹೇಳಿದ್ರು.
ಸಿಹಿ ತಿಂಡಿ ಮಳಿಗೆಯ ಈ ಪ್ಲಾನ್ ಗ್ರಾಹಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ವಿಚಾರವಾಗಿ ಮಾತನಾಡಿದ ಗ್ರಾಹಕರೊಬ್ಬರು, ತರಹೇವಾರಿ ತಿನಿಸುಗಳನ್ನ ತಯಾರಿಸೋಕೆ ಈ ಮಳಿಗೆ ಫೇಮಸ್ ಆಗಿದೆ. ನನ್ನಂತೆ ಉಳಿದ ಗ್ರಾಹಕರಿಗೂ ಈ ತಿನಿಸು ಇಷ್ಟವಾಗುತ್ತೆ ಎಂದು ಹೇಳಿದ್ರು.
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಂದು ವಿಧಾನಸಭೆ ಚುನಾವಣೆ ಆರಂಭವಾಗಲಿದೆ. 8 ಹಂತಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು ಕೊನೆಯ ಹಂತ ಏಪ್ರಿಲ್ 29ರಂದು ನಡೆಯಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ
Laxmi News 24×7