Breaking News

ಮತ್ತೂಂದು ಸ್ಪೇಸ್‌ ಎಕ್ಸ್‌ ರಾಕೆಟ್‌ ಸ್ಫೋಟ

Spread the love

ಕ್ಯಾಲಿಫೋರ್ನಿಯಾ: ಅಮೆರಿಕದ ಪ್ರಸಿದ್ಧ ರಾಕೆಟ್‌ ನಿರ್ಮಾಣ ಸಂಸ್ಥೆ ಸ್ಪೇಸ್‌ ಎಕ್ಸ್‌ನ ಸ್ಟಾರ್‌ಶಿಪ್‌ ಪರೀಕ್ಷಾ ಮಾದರಿಯ ರಾಕೆಟ್‌, ಅತ್ಯುನ್ನತ ಎತ್ತರದ ಪರೀಕ್ಷಾ ಹಾರಾಟ ಮುಗಿಸಿ, ಲ್ಯಾಂಡ್‌ ಆಗುವ ವೇಳೆ ಸ್ಫೋಟಗೊಂಡಿದೆ. ಮುಂದಿನ ಪೀಳಿಗೆಯ ವಾಹನವಾದ “ಎಸ್‌ಎನ್‌- 10′ ರಾಕೆಟ್‌, ಟೆಕ್ಸಾಸ್‌ನ ಬೊಕಾ ಚಿಕಾ ಎಂಬಲ್ಲಿ ಸುರಕ್ಷಿತವಾಗಿಯೇ ಇಳಿದಿತ್ತು. ಆದರೆ ಕಾಂಕ್ರೀಟ್‌ ಲ್ಯಾಂಡಿಂಗ್‌ ಪ್ಯಾಡ್‌ ಮೇಲೆ ಇಳಿದ ಎಂಟೇ ನಿಮಿಷಗಳಲ್ಲಿ ಸ್ಫೋಟದಿಂದ ಛಿದ್ರವಾಗಿದೆ. ರ್ಯಾಪ್ಟರ್‌ ಎಂಜಿನ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಸ್ಫೋಟಕ್ಕೆ ಕಾರಣ ಎಂದು ತಿಳಿದುಬಂದಿದೆ.

3ನೇ ವೈಫ‌ಲ್ಯ: ಈಗಿರುವ ಫಾಲ್ಕನ್‌ ರಾಕೆಟ್‌ಗಳಿಗೆ ಪರ್ಯಾಯವಾಗಿ ಸುಧಾರಿತ ಮಾದರಿಯಲ್ಲಿ ನಿರ್ಮಿಸಲಾದ ಸ್ಟಾರ್‌ಶಿಪ್‌ ರಾಕೆಟ್‌ಗಳನ್ನು ಸರಣಿ ರೂಪದಲ್ಲಿ ಸ್ಪೇಸ್‌ ಎಕ್ಸ್‌ ಪರೀಕ್ಷೆಗೊಳಪಡಿಸುತ್ತಿದೆ. ಈಗಾಗಲೇ ಎಸ್‌ಎನ್‌-8, ಎಸ್‌ಎನ್‌-9 ಪರೀಕ್ಷೆ ಪೇಲವ ಅಂತನ್ನಿಸಿಕೊಂಡರೂ ಪ್ರಸ್ತುತ ಸ್ಫೋಟಗೊಂಡ ಎಸ್‌ಎನ್‌-9 ರಾಕೆಟ್‌ ವಾಹನ ನಿರೀಕ್ಷೆಗೂ ಮೀರಿ ಫ‌ಲಿತಾಂಶ ನೀಡಿದೆ. 50 ಮೀಟರ್‌ ಎತ್ತರದ ಈ ಸ್ಟಾರ್‌ಶಿಪ್‌ ರಾಕೆಟ್‌ ಕಕ್ಷೀಯ ಉಪಗ್ರಹಗಳನ್ನಲ್ಲದೆ, ಸಿಬಂದಿ- ಪ್ರಯಾಣಿಕರನ್ನೂ ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ಈ ರಾಕೆಟ್‌ ಬಳಸಿಯೇ 2023ರಲ್ಲಿ ಚಂದ್ರ, ಮಂಗಳನಲ್ಲಿ ಮಾನವನನ್ನು ಕರೆದೊಯ್ಯಲು ಮಸ್ಕ್ ಯೋಜಿಸಿದ್ದಾರೆ.

ಸ್ಪೇಸ್‌ ಎಕ್ಸ್‌ ಮೇಲೆ ಸಾಕಷ್ಟು ನಿರೀಕ್ಷೆ :

ಮಸ್ಕ್ ಅವರು ತಮ್ಮ ಕನಸನ್ನು ಪ್ರಕಟಿಸುತ್ತಿದ್ದಂತೆ ಜಗತ್ತಿನ ನಾನಾ ಉದ್ಯಮಿಗಳು, ಈ ಆಕಾಶಕಾಯದಲ್ಲಿ ಮಂಗಳ ಅಥವಾ ಚಂದ್ರನನ್ನು ಸುತ್ತುವ ತವಕದಲ್ಲಿದ್ದಾರೆ. ಮೊನ್ನೆಯಷ್ಟೇ ಜಪಾನಿನ ಉದ್ಯಮಿಯೊಬ್ಬ, ಚಂದ್ರದಲ್ಲಿಗೆ ಹೋಗುವ ಸ್ಪೇಸ್‌ ಎಕ್ಸ್‌ನ ಆಕಾಶಕಾಯದಲ್ಲಿ ತಾನು 9 ಸೀಟುಗಳನ್ನು ಬುಕ್‌ ಮಾಡಿದ್ದು, ತನ್ನೊಂದಿಗೆ ಬರುವವರು ತನ್ನನ್ನು ಸಂಪರ್ಕಿಸಿ ಆಸನಗಳನ್ನು ಬುಕ್‌ ಮಾಡಿಕೊಳ್ಳಬಹುದು ಎಂದು ಜಗತ್ತಿನ ಎಲ್ಲ ರಾಷ್ಟ್ರಗಳ ನಾಗರಿಕರಿಗೆ ಆಫ‌ರ್‌ ಕೊಟ್ಟಿದ್ದಾರೆ.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ