ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫನ್ನಿ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೇ ಸಾಲಿಗೆ ಸೇರಿದ ಮತ್ತೊಂದು ಫೋಟೋ ಇಂಟರ್ನೆಟ್ನಲ್ಲಿ ಹರಿದಾಡ್ತಾ ಇದ್ದು ಇದನ್ನ ನೋಡಿದ ಬಳಿಕ ನಿಮಗೆ ನಿಮ್ಮ ಲವ್ ಲೈಫ್ ನೆನಪಾಗೋದಂತು ಫಿಕ್ಸ್.
ಮನುಷ್ಯ ಪ್ರೀತಿಯಲ್ಲಿ ಬಿದ್ದ ಅಂದರೆ ಸಾಕು ಆತನಿಗೆ ಹಸಿವು – ನಿದ್ದೆಯ ಅರಿವು ಇರೋದಿಲ್ಲ ಅಂತಾರೆ. ಅಕ್ಕಪಕ್ಕದಲ್ಲಿ ಏನು ನಡೀತಾ ಇದೆ ಅನ್ನೋದೇ ಅವರ ಗಮನಕ್ಕೆ ಬರೋದಿಲ್ಲ. ಇಂಟರ್ನೆಟ್ನಲ್ಲಿ ವೈರಲ್ ಆದ ಫೋಟೋ ಕೂಡ ಈ ಮಾತಿಗೆ ಕೈಗನ್ನಡಿಯಂತಿದೆ. ಹಿಂದೆ ಈರುಳ್ಳಿ ತುಂಬಿದ ಲಾರಿ ಪಲ್ಟಿಯಾಗಿ ಬಿದ್ದಿದ್ದರೂ ಸಹ ಈ ಗಂಭೀರತೆ ಅರ್ಥವೇ ಆಗದ ರೀತಿಯಲ್ಲಿ ಡ್ರೈವರ್ ಫೋನ್ ಕಾಲ್ನಲ್ಲಿ ಮಗ್ನನಾಗಿದ್ದಾನೆ.
ಈ ಫೋಟೋವನ್ನ ಐಪಿಎಸ್ ಅಧಿಕಾರಿ ಅರುಣ್ ಬೇಥರಾ ಶೇರ್ ಮಾಡಿದ್ದಾರೆ. ಈ ಫೋಟೋ ನೋಡ್ತಿದ್ರೆ ಆ ಕಡೆ ಲೈನ್ನಲ್ಲಿ ಯಾರಿದ್ದಾರೆ ಅನ್ನೋದನ್ನ ಸುಲಭವಾಗಿ ಊಹಿಸಬಹುದಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದ್ದು ಟ್ರೋಲಿಗರ ಬಾಯಿಗೆ ಬಾಡೂಟದಂತಾಗಿದೆ.
His royal posture in this situation tells who is on the other end of the call 😉 pic.twitter.com/swDlo3ImPy
— Arun Bothra 🇮🇳 (@arunbothra) March 2, 2021
 Laxmi News 24×7
Laxmi News 24×7
				 
		 
						
					 
						
					 
						
					